ಬೆಂಗಳೂರು: ಜನತಾ ಪರಿವಾರ ಎಂದರೆ ದೇವೇಗೌಡ & ಸನ್ಸ್ ಪ್ರೈವೇಟ್ ಲಿಮಿಟೆಡ್ ಎಂದಾಗಿದೆ. ಜೆಡಿಎಸ್ ಪಕ್ಷ ಹೇಳಿಕೊಳ್ಳುತ್ತಿರುವ ಮಿಷನ್ 123 ವಾಸ್ತವದಲ್ಲಿ ಮಿಷನ್ 1+2+3! ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಮಿಷನ್ 123ಯಲ್ಲಿ ಮೊದಲ ಸಂಖ್ಯೆ 1 ಅಂದರೆ ದೇವೇಗೌಡ, ಎರಡನೇ ಸಂಖ್ಯೆ 2 ಅಂದರೆ ಕುಮಾರಸ್ವಾಮಿ, ರೇವಣ್ಣ ಮತ್ತು ಮೂರನೇ ಸಂಖ್ಯೆ 3 ಅಂದರೆ ಅನಿತಾ, ಪ್ರಜ್ವಲ್, ಸೂರಜ್ ಆಗಿದೆ. ನಾಡುನುಡಿ, ಸಾಮಾಜಿಕ ಬದ್ಧತೆ ಎಲ್ಲಾ ನೆಪವಷ್ಟೇ, ಕುಟುಂಬದ ಉದ್ಧಾರವೇ ಅಂತಿಮ ಗುರಿ. ಇದು ಕುಟುಂಬವಾದ ಅಲ್ಲದೆ ಮತ್ತೇನು? ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿ ಟೀಕಿಸಿದೆ.
123 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ ಎಂದು ಬೀಗುವ ಕುಮಾರಸ್ವಾಮಿ ಅವರು ಮೊದಲು 123 ಕ್ಷೇತ್ರಗಳಿಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳು ಲಭ್ಯರಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿ. ಜೆಡಿಎಸ್ ಪಕ್ಷದ ವಂಶಾಡಳಿತದಿಂದ ಬೇಸತ್ತು ವಲಸೆ ಹೋಗುವವರ ಸಂಖ್ಯೆಯೇ ಇದರ ಕಾಲು ಭಾಗದಷ್ಟಿದೆ. ಹೀಗಿರುವಾಗ ಜೆಡಿಎಸ್ ನಾಮಾವಶೇಷವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದಿದೆ.
ಇದನ್ನೂ ಓದಿ:90ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ದೇವೇಗೌಡ..ಹಿರಿಯ ಮುತ್ಸದ್ಧಿಯ ರಾಜಕೀಯ ಹೆಜ್ಜೆಗುರುತುಗಳು
ಭಾರತಕ್ಕೆ ನೆಹರು ಕುಟುಂಬವಾದದ ಪಿತಾಮಹರಾದರೆ, ಕರ್ನಾಟಕಕ್ಕೆ ದೇವೇಗೌಡರೇ ಕುಟುಂಬವಾದದ ಆದ್ಯ ಪಿತಾಮಹ. ಕುಮಾರಸ್ವಾಮಿ ಈ ಕುಟುಂಬವಾದದ ಬಹುದೊಡ್ಡ ಫಲಾನುಭವಿ ಎಂದು ಲೇವಡಿ ಮಾಡಿದೆ.