ಬೆಂಗಳೂರು:ಲಾಕ್ಡೌನ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ 300 ಕಿ.ಮೀ ವೇಗದಲ್ಲಿ ಬೈಕ್ ಓಡಿಸಿದ್ದ ಬೈಕ್ ಸವಾರನನ್ನು ಸಂಚಾರ ಪೊಲೀಸರು ಬಂಧಿಸಿದ್ದಾರೆ.
300 ಕಿ.ಮೀ ವೇಗದಲ್ಲಿ ಬೈಕ್ ಓಡಿಸಿದವನನ್ನ ಕಂಬಿ ಹಿಂದೆ ತಳ್ಳಿದ ಪೊಲೀಸ್: ವಿಡಿಯೋ
ಬೆಂಗಳೂರಿನ ಎಲೆಕ್ಟ್ರಾನ್ ಸಿಟಿ ಹಾಗೂ ಇನ್ನಿತರ ಖಾಲಿ ರಸ್ತೆಗಳಲ್ಲಿ 300 ಕಿ.ಮೀ. ವೇಗದಲ್ಲಿ ಬೈಕ್ ಚಲಾಯಿಸಿದ್ದ ಸವಾರನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಎಲೆಕ್ಟ್ರಾನ್ ಸಿಟಿ ಹಾಗೂ ಇನ್ನಿತರ ಖಾಲಿ ರಸ್ತೆಯಲ್ಲಿ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದ. ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನು ನೋಡಿದ ಸಿಸಿಬಿ ಪೊಲೀಸರು ಆತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು, ಸಂಚಾರಿ ಪೊಲೀಸರ ಸುಪರ್ದಿಗೆ ಹಸ್ತಾಂತರಿಸಿದರು.
ಮುನಿಯಪ್ಪ (29 ವರ್ಷ) ಬಂಧಿತ. ಮೋಜು ಮಸ್ತಿಗಾಗಿ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಯಮಹ 1,000 ಸಿಸಿ ಬೈಕ್ ಅನ್ನು ಜಪ್ತಿ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ವ್ಯವಸ್ಥಾಪಕ ಪ್ರಾಧಿಕಾರ (ಎನ್ಡಿಎಂಎ) ಕಾಯ್ದೆ ಸೇರಿ ಹಲವು ಐಪಿಸಿ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.