ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರೇ ಹುಷಾರ್... ಮನೆಗೇ ಬರ್ತಾರೆ ಪೊಲೀಸ್ರು! - ಸವಾರರ ಮನೆಗೇ ಬಂದು ದಂಡ ಹಾಕ್ತಾರೆ ಪೊಲೀಸರು

ಸಾಕಷ್ಟು ಬಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿಸದ ವಾಹನ ಸವಾರರಿಂದ ದಂಡ ವಸೂಲಿಗೆ ಬುಧವಾರದಿಂದ ಪೊಲೀಸರು ಇಳಿದಿದ್ದಾರೆ. ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನಿರ್ದೇಶನದ ಮೇರೆಗೆ ದಂಡ ವಸೂಲಿ ಮಾಡಲಾಗುತ್ತಿದೆ.

bengaluru-traffic
ದಂಡ ವಸೂಲಿ

By

Published : Nov 5, 2020, 2:40 AM IST

Updated : Nov 5, 2020, 6:27 AM IST

ಬೆಂಗಳೂರು:ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಬೆಂಗಳೂರು ಸಂಚಾರ ಪೊಲೀಸರು ಮನೆಗೆ ಹೋಗಿ ದಂಡ ವಸೂಲಿ ಮಾಡುತ್ತಿದ್ದಾರೆ.

ಕೆಆರ್ ಪುರ ಭಾಗದ ರಾಮಮೂರ್ತಿ ನಗರ, ಮಹದೇವಪುರ, ಮಾರತಹಳ್ಳಿ, ಕುಂದಲಹಳ್ಳಿ, ಕಾಡುಗೋಡಿ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗೆ ತೆರಳಿ ದಂಡ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸುವವರೇ ಹುಷಾರ್, ಯಾಕಂದ್ರೆ ನಿಮ್ಮ ವಾಹನದ ವಿರುದ್ಧ ಐದಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿದ್ರೆ ಮನೆ ಬಳಿಯೇ ಬಂದು ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡ್ತಾರೆ.

ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿಸದಿದ್ರೆ ಮನೆ ಬಳಿಗೆ ಬಂದು ದಂಡ ವಸೂಲಿ ಮಾಡಲಾಗುತ್ತಿದ್ದು, ಇದೀಗ ಕೆ.ಆರ್.ಪುರಂ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಮನೆ-ಮನೆಗೆ ತೆರಳಿ ಇದುವರೆಗೆ ಮೂರು ಲಕ್ಷ ದಂಡವನ್ನ ವಸೂಲಿ ಮಾಡಲಾಗಿದೆ.

ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ

ಬರೋಬ್ಬರಿ 61 ಬಾರಿ‌ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯಿಂದ ದಂಡ ವಸೂಲಿ ಮಾಡಲಾಗಿದೆ. ಬೈಕ್ ಸವಾರನೊಬ್ಬನಿಂದ 32 ಸಾವಿರ ರೂಪಾಯಿ ದಂಡವನ್ನ ಕೆಆರ್ ಪುರಂ ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ. ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನಿರ್ದೇಶನದ ಮೇರೆಗೆ ದಂಡ ವಸೂಲಿ ಮಾಡಲಾಗುತ್ತಿದೆ.

ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಸಿಸಿಟಿವಿ ದೃಶ್ಯ ಆಧರಿಸಿ ಟಿಎಂಸಿ ಸೆಂಟರ್ ನಿಂದ ನೇರವಾಗಿ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ಸವಾರರ ನಿವಾಸಕ್ಕೆ ಆ ನೋಟಿಸ್ ಕೊಟ್ಟು, ಅದನ್ನು ಸ್ವೀಕರಿಸಿ ಬೆಂಗಳೂರು ಓನ್ ಅಥವಾ ಹತ್ತಿರದ ಸಂಚಾರ ಠಾಣೆಗೆ ತೆರಳಿ ದಂಡ ಪಾವತಿಸಬೇಕು. ಇಲ್ಲದೇ ಹೋದರೆ ಪೊಲೀಸರೇ ಮನೆ ಬಾಗಿಲಿಗೆ ಬಂದು ದಂಡ ಸಂಗ್ರಹಿಸುತ್ತಿದ್ದಾರೆ.

Last Updated : Nov 5, 2020, 6:27 AM IST

ABOUT THE AUTHOR

...view details