ಕರ್ನಾಟಕ

karnataka

ETV Bharat / city

ಬೆಂಗಳೂರು ಕೋವಿಡ್ ವರದಿ.. ಕೊಂಚ ತಗ್ಗಿದ ಸೋಂಕು - ಬೆಂಗಳೂರಲ್ಲಿ ಕಡಿಮೆಯಾದ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರಲ್ಲಿ ಇಂದು 18,622 ಜನರಲ್ಲಿ ಕೋವಿಡ್ ಪಾಸಿಟಿವ್ ಕೇಸ್​ಗಳು ದೃಢಪಟ್ಟಿದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಯಿದ್ದ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವ ಸಾಧ್ಯತೆ ಇದೆ.

ಬೆಂಗಳೂರು ಕೋವಿಡ್ ವರದಿ
ಬೆಂಗಳೂರು ಕೋವಿಡ್ ವರದಿ

By

Published : Jan 17, 2022, 10:05 AM IST

Updated : Jan 17, 2022, 12:43 PM IST

ಬೆಂಗಳೂರು: ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಇಂದು ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಕೊಂಚಮಟ್ಟಿನ ಇಳಿಕೆ ಕಂಡಿದ್ದು, 18,622 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಕೋವಿಡ್ ಮೂರನೇ ಅಲೆ ಆರಂಭವಾದಾಗಿನಿಂದ ಜ.15 ಶನಿವಾರದಂದು ಅತಿಹೆಚ್ಚು ಅಂದರೆ 22,284 ಪ್ರಕರಣಗಳು ದೃಢಪಟ್ಟಿದ್ದವು. ಆದರೆ ಆ ನಂತರ ಭಾನುವಾರ ಮತ್ತು ಇಂದು ಪಾಸಿಟಿವ್ ಪ್ರಕರಣಗಳಲ್ಲಿ ಇಳಿಕೆಯಾಗಿದೆ.

ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಯಿದ್ದ ಹಿನ್ನೆಲೆ ಹೆಚ್ಚು ಜನ ಹೊರಗೆ ಬಾರದೇ ಟೆಸ್ಟಿಂಗ್ ಕಡಿಮೆಯಾದ ಕಾರಣದಿಂದಲೂ ಸೋಂಕು ಇಳಿಮುಖವಾಗಿರುವ ಸಾಧ್ಯತೆ ಇದೆ.

ಇಂದು ಬೊಮ್ಮನಹಳ್ಳಿ ವಲಯದಲ್ಲಿ 1,759, ದಾಸರಹಳ್ಳಿ 467, ಬೆಂಗಳೂರು ಪೂರ್ವ 3,046 , ಮಹದೇವಪುರ 2,733, ಆರ್ ಆರ್‌ನಗರ 1,269, ದಕ್ಷಿಣ ವಲಯ 2,538, ಪಶ್ಚಿಮ 1,891, ಯಲಹಂಕ 1,669, ಅನೇಕಲ್ 819, ಬೆಂಗಳೂರು ಹೊರವಲಯ 1,446 ಸೇರಿ ಒಟ್ಟು 18,622 ಪಾಸಿಟಿವ್ ದೃಢಪಟ್ಟಿವೆ.

ಜ.13 ರಂದು 18,324, ಜ.14 ರಂದು 20121, ಜ.15 ರಂದು 22,284, ನಿನ್ನೆ ಭಾನುವಾರ 21,071 ಕೇಸ್​ಗಳು ಕಂಡು ಬಂದಿದ್ದವು. ನಿನ್ನೆಯವರೆಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 95089 ಇದ್ದು, ಪಾಸಿಟಿವಿಟಿ ಪ್ರಮಾಣ ಶೇ.16.97 ರಷ್ಟಿತ್ತು. ಮೈಕ್ರೋ ಕಂಟೈನ್​​ಮೆಂಟ್ ಝೋನ್​​ಗಳು 584 ಕ್ಕೆ ಏರಿಕೆಯಾಗಿವೆ.

ವಿದೇಶದಿಂದ ಬಮದವರಿಗೆ ಕೊರೊನಾ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ ಹಾಗೂ ಇಂದು ಬೆಳಗಿನ ಜಾವ ಆಗಮಿಸಿದ 7 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಯುಕೆ ಮೂಲದ 4, ಸ್ವೀಡನ್ ಮೂಲದ 1, ಯುಎಸ್ ಮೂಲದ 2 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತ ಪ್ರಯಾಣಿಕರನ್ನು ವಿವಿಧ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

(ಇದನ್ನೂ ಓದಿ: ವ್ಯಕ್ತಿಯ ಒಪ್ಪಿಗೆ ಪಡೆಯದೇ ಬಲವಂತದ ಲಸಿಕೆ ಹಾಕುವಂತಿಲ್ಲ: ಸುಪ್ರೀಂಗೆ ಅಫಿಡವಿಟ್​​ ಸಲ್ಲಿಸಿದ ಕೇಂದ್ರ)

Last Updated : Jan 17, 2022, 12:43 PM IST

ABOUT THE AUTHOR

...view details