ಕರ್ನಾಟಕ

karnataka

ETV Bharat / city

''ಕಂಟೋನ್ಮೆಂಟ್​ಗಳಲ್ಲಿ ರಾಜಕಾಲುವೆ ಒತ್ತುವರಿ ಕಡಿಮೆ: ಮಳೆ ಅನಾಹುತಗಳೂ ಕಡಿಮೆ'' - ಮಳೆಗಾಲದಲ್ಲಿ ಬೆಂಗಳೂರು

ಕಂಟೋನ್ಮೆಂಟ್​ಗಳಲ್ಲಿ ಸೇನಾ ಘಟಕಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳುವ ಕಾರಣದಿಂದ ಅಲ್ಲಿ ಮಳೆಗಾಲದಲ್ಲಿ ಅನಾಹುತಗಳಾಗುವುದು ತುಂಬಾನೇ ವಿರಳವಾಗಿರುತ್ತದೆ ಎಂದು ಎಂದು ಬಿಬಿಎಂಪಿ ಮಳೆ ನೀರುಗಾಲುವೆಯ ಮುಖ್ಯ ಇಂಜಿನಿಯರ್ ಆಗಿದ್ದ ಪ್ರಹ್ಲಾದ್ ತಿಳಿಸಿದ್ದಾರೆ.

By

Published : Jun 17, 2020, 1:01 PM IST

ಬೆಂಗಳೂರು: ನಗರದ ಹಲವು ತಗ್ಗು ಪ್ರದೇಶಗಳಲ್ಲಿ, ರಾಜಕಾಲುವೆ ಪಕ್ಕದ ಬಡಾವಣೆಗಳಲ್ಲಿ ಮಳೆ ನೀರು ನುಗ್ಗಿ ಅನಾಹುತಗಳಾಗುತ್ತವೆ. ಆದರೆ, ನಗರದ ನೂರಾರು ಎಕರೆಯ ಮಿಲಿಟರಿ ಪ್ರದೇಶಗಳಲ್ಲಿ ಈ ರೀತಿ ಅನಾಹುತಗಳು ನಡೆಯೋದು ಕಡಿಮೆ. ಸೇನಾ ತಂಡಗಳು ರಾಜಕಾಲುವೆ ಜಾಗದ ರಕ್ಷಣೆ ಮಾಡಿಕೊಳ್ಳುವ ಕಾರಣದಿಂದ ಅನಾಹುತಗಳು ತುಂಬಾನೇ ವಿರಳವಾಗಿರುತ್ತವೆ.

ಬಿ.ಹೆಚ್.ಅನಿಲ್ ಕುಮಾರ್

ಹೌದು, ಕಂಟೋನ್ಮೆಂಟ್ ಪ್ರದೇಶದ ಒಳಗಿನ ರಾಜಕಾಲುವೆಗಳಲ್ಲಿ ಕಸ ಬೀಳುವುದಿಲ್ಲ. ಅದರ ಜಾಗವನ್ನೂ ಒತ್ತುವರಿ ಮಾಡಿರುವುದಿಲ್ಲ. ಇದರಿಂದ ರಾಜಕಾಲುವೆ ತುಂಬಿ ಮಳೆ ನೀರು ನುಗ್ಗುವ ಘಟನೆ ನಡೆಯುವುದಿಲ್ಲ ಎಂದು ಬಿಬಿಎಂಪಿ ಮಳೆ ನೀರುಗಾಲುವೆಯ ಮುಖ್ಯ ಇಂಜಿನಿಯರ್ ಆಗಿದ್ದ ಪ್ರಹ್ಲಾದ್ ತಿಳಿಸಿದ್ದಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ, ಹಲಸೂರು ಬಳಿಯ ಎಂಇಜಿ (ಮದ್ರಾಸ್ ಇಂಜಿನಿಯರ್ಸ್ ಗ್ರೂಪ್) ಸೇನಾ ತಂಡದ ವಕ್ತಾರ ಪಾರ್ಥಸಾರಥಿ, ಮಳೆಗಾಲಕ್ಕೆ ಮುನ್ನವೇ ಚರಂಡಿಗಳ ಹೂಳು ತೆಗೆಯುವುದು, ಮ್ಯಾನ್ ಹೋಲ್​ಗಳ ಸ್ವಚ್ಚತೆ, ರಾಜಕಾಲುವೆಗಳ ಹೂಳು ತೆಗೆಯಲು ಕ್ರಮಕೈಗೊಳ್ಳಲಾಗುತ್ತದೆ. ಹಲಸೂರು ಕೆರೆಯ ಹೂಳು, ಕಳೆ ತೆಗೆಯುವ ಕೆಲಸವನ್ನೂ ಎಂಇಜಿ ಸೈನಿಕರ ತಂಡ ಮಾಡಿದೆ ಎಂದು ಸ್ಪಷ್ಟನೆ ನೀಡಿದರು.

ಕಂಟೋನ್ಮೆಂಟ್ ಪ್ರದೇಶದ ಒಳಗೆ ನಗರದ ಜನರ ಮನೆಗಳೂ ಇದ್ದು, ಆ ಪ್ರದೇಶಗಳಲ್ಲಿ ಬಿಬಿಎಂಪಿ ಹಾಗೂ ಕಂಟೋನ್ಮೆಂಟ್ ಬೋರ್ಡ್ ಜಂಟಿಯಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು. ಈಗಾಗಲೇ ಸ್ವಚ್ಚತೆ ಮತ್ತು ಹೂಳೆತ್ತುವ ಕಾರ್ಯ ಮುಗಿಸಲಾಗಿದ್ದು, ಮಳೆಗಾಲದಲ್ಲಿ ಯಾವುದೇ ಅನಾಹುತ ಆಗುವುದಿಲ್ಲ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪರಿಸರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಡಿಫೆನ್ಸ್ ತಂಡಗಳು ಸ್ಥಳೀಯ ಸಂಸ್ಥೆಗಳಿಗೆ ಸಹಕಾರ ನೀಡುತ್ತಲೇ ಬಂದಿವೆ. ರಾಜಕಾಲುವೆ, ಚರಂಡಿಗಳ ಸುಸ್ಥಿತಿ, ರಸ್ತೆ ದುರಸ್ತಿ ಸೇರಿದಂತೆ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಂಡಿರುವುದು ಸಂತೋಷದ ವಿಚಾರ.

ABOUT THE AUTHOR

...view details