ಕರ್ನಾಟಕ

karnataka

ETV Bharat / city

ಸಿಸಿಬಿಯಿಂದ ಹೈಫೈ ಡ್ರಗ್ಸ್​​​​ ಪೆಡ್ಲರ್​ಗಳ ಬಂಧನ: ಡಾರ್ಕ್ ವೆಬ್​ನಲ್ಲಿ ಮಾದಕ ಜಾಲ! - ಬೆಂಗಳೂರು ಸಿಸಿಬಿ

ಡಾರ್ಕ್​​ ವೆಬ್​​ಸೈಟ್​ಗಳ ಮೂಲಕ ಡ್ರಗ್ಸ್​ಗಳನ್ನು ಖರೀದಿಸಿ ಯುವಕರಿಗೆ ಮಾರಾಟ ಮಾಡಲು ಯೋಜನೆ ರೂಪಿಸಿದ್ದ ಡ್ರಗ್ಸ್​​​​ ಪೆಡ್ಲರ್​​ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 90 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

bengalore-ccb-police-arrested-drugs-peddlers
ಡ್ರಗ್ ಪೆಡ್ಲರ್

By

Published : Nov 2, 2020, 3:36 PM IST

Updated : Nov 2, 2020, 4:16 PM IST

ಬೆಂಗಳೂರು: ವಿದೇಶದಿಂದ ಸಾಮಾಜಿಕ ಜಾಲತಾಣದ ಮೂಲಕ ಡ್ರಗ್ಸ್​​​​​ ಖರೀದಿ ಮಾಡಿದ್ದ ಪೆಡ್ಲರ್​ಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾದಕ ಜಾಲ ಪತ್ತೆಗಿಳಿದಿರುವ ಸಿಸಿಬಿ ಪೊಲೀಸರು, ಕಳೆದ 10 ದಿನಗಳಿಂದ ಕಾರ್ಯಾಚರಣೆ ನಡೆಸಿ ವಿದೇಶದಿಂದ ಖರೀದಿಸಿದ್ದ ಡ್ರಗ್ಸ್​ ಸಮೇತ ಸಾರ್ಥಕ್​ ಆರ್ಯ, ನಿತೀನ್, ಕಾರ್ತಿಕ್ ಗೌಡ, ಝುಮಾನಮನ್, ಮಹಮದ್ ಅಲಿ, ಅಮಲ್ ಬೈಜು, ಫಿನಿಕ್ಸ್ ಶೋನ್, ಪಾಲಡುಗ, ಸನ್ನಿ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ನೈಜೀರಿಯಾ ಪ್ರಜೆಯನ್ನೂ ಬಂಧಿಸಲಾಗಿದೆ.

ಸಿಸಿಬಿಯಿಂದ ಹೈಫೈ ಡ್ರಗ್ಸ್​​​​ ಪೆಡ್ಲರ್​ಗಳ ಬಂಧನ

ಡಾರ್ಕ್ ವೆಬ್ ಮುಖಾಂತರ ಬಿಟ್ ಕಾಯಿನ್ ಬಳಸಿ ಎಂಫೈರ್ ಮಾರ್ಕೆಟ್​​, ಸಿಲ್ಕ್ ರೂಟ್, ಡ್ರಗ್ಸ್​ ಬೋರ್ಡ್ ಮತ್ತಿತರ ವೆಬ್​ಸೈಟ್​​ಗಳಿಂದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳು ಮತ್ತು ನಿದ್ರಾಜನಕ ಮಾತ್ರೆಗಳನ್ನು ಬುಕ್ ಮಾಡಿ ಪೋಸ್ಟ್​​ ಮೂಲಕ ಆಮದು ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಕಸ್ಟಮ್ಸ್​​ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಹೆಚ್​ಎಸ್​ಆರ್​ ಲೇಔಟ್, ವಿಜಯನಗರ, ಮಹಾಲಕ್ಷ್ಮಿ ಪುರಂ, ಹಲಸೂರು, ಕೆ.ಜಿ.ಹಳ್ಳಿ, ಇಂದಿರ ನಾಗರ, ಎಹೆಚ್​ಎಲ್​ ಮತ್ತು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 8 ಸ್ಥಳಗಳಲ್ಲಿ ದಾಳಿ ನಡೆಸಿ ಪಡ್ಲರ್​​ಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 90 ಲಕ್ಷ ಬೆಲೆ ಬಾಳುವ ಮಾದಕ ವಸ್ತುಗಳಾದ 660 ಎಲ್​ಎಸ್​​ಡಿ ಪೇಪರ್, 386 ಎಂಡಿಎಂಎ 180 ಎಕ್ಸ್ಟೆಸಿ ಮಾತ್ರೆ, 12 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 10 ಗ್ರಾಂ ಕೊಕೇನ್ ಪುಡಿ, 12 ಮೊಬೈಲ್ ಫೋನ್, 3 ಲ್ಯಾಪ್​​ಟಾಪ್​​, 2 ದ್ವಿಚಕ್ರ ವಾಹನ ಹಾಗೂ ಪೋಸ್ಟಲ್ ಕವರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Nov 2, 2020, 4:16 PM IST

ABOUT THE AUTHOR

...view details