ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಜಾನೆಯಲ್ಲಿ ದಾಖಲೆಯ ಆಸ್ತಿ ತೆರಿಗೆ ಸಂಗ್ರಹವಾಗಿದೆ. 2021-22ರ ಆರ್ಥಿಕ ವರ್ಷದಲ್ಲಿ ಮೂರು ಸಾವಿರ ಕೋಟಿ ತೆರಿಗೆ ವಸೂಲಿ ಮಾಡುವ ಗುರಿಯನ್ನು ಪಾಲಿಕೆ ಹೊಂದಿತ್ತು. ಅದರಂತೆ, ಮಾರ್ಚ್ 2022ರ ಅಂತ್ಯಕ್ಕೆ 3,074 ಕೋಟಿ ರೂ. ಸಂಗ್ರಹಿಸಿ ದಾಖಲೆ ಮಾಡಿದೆ. ಮಹದೇವಪುರ ವಲಯದಲ್ಲಿ ಅತೀ ಹೆಚ್ಚು ತೆರಿಗೆ ವಸೂಲಿಯಾಗಿದೆ.
ವಲಯವಾರು ತೆರಿಗೆ ಸಂಗ್ರಹ ಮಾಹಿತಿ:
ವಲಯ | ತೆರಿಗೆ ಮೊತ್ತ |
ಪೂರ್ವ ವಲಯ | 584.31 ಕೋಟಿ |
ಪಶ್ಚಿಮ ವಲಯ | 334.92 ಕೋಟಿ |
ದಕ್ಷಿಣ ವಲಯ | 448.50 ಕೋಟಿ |
ಬೊಮ್ಮನಹಳ್ಳಿ | 328.51 ಕೋಟಿ |
ಆರ್.ಆರ್. ನಗರ | 202.47 ಕೋಟಿ |
ದಾಸರಹಳ್ಳಿ | 83.56 ಕೋಟಿ |
ಮಹದೇವಪುರ | 793.98 ಕೋಟಿ |
ಯಲಹಂಕ ವಲಯ | 290.91 ಕೋಟಿ |