ಕರ್ನಾಟಕ

karnataka

ETV Bharat / city

ಪಾವತಿಯಾಗದ ಸಾಲ... ವಾಟಾಳ್​ ಮನೆ ಮೇಲೆ ಬ್ಯಾಂಕ್​ ಅಧಿಕಾರಿಗಳ ದಾಳಿ

ಬ್ಯಾಂಕ್​ ಸಾಲ ಮರುಪಾವತಿ ಮಾಡದ ಹಿನ್ನೆಲೆ ವಾಟಾಳ್​ ನಾಗರಾಜ್​ ಮನೆ ಮೇಲೆ ಬ್ಯಾಂಕ್​ ಅಧಿಕಾರಿಗಳು ದಾಳಿ ನಡೆಸಿದರು

ವಾಟಾಳ್​ ನಾಗರಾಜ್​ ಮನೆ ಮೇಲೆ ಬ್ಯಾಂಕ್​ ಅಧಿಕಾರಿಗಳ ದಾಳಿ

By

Published : Mar 6, 2019, 6:01 PM IST

ಬೆಂಗಳೂರು:ಮನೆ ಮೇಲೆ ವಿಜಯ ಬ್ಯಾಂಕ್​ನಿಂದ ಸಾಲ ಪಡೆದಿದ್ದ ವಾಟಾಳ್ ನಾಗರಾಜ್ ಎಷ್ಟೇ ನೊಟಿಸ್ ನೀಡಿದರೂ ಮರುಪಾವತಿ ಮಾಡದ್ದಕ್ಕೆ ಇಂದು ಬ್ಯಾಂಕ್​ ನ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿದ್ದಾರೆ.

ಬ್ಯಾಂಕ್‌ ಸಿಬ್ಬಂದಿ ದಾಳಿ ನಡೆಸಿದ ವಿಷಯ ತಿಳಿದು ಮನೆಗೆ ಬಂದ ವಾಟಾಳ್​, ಮಾಧ್ಯಮಗಳತ್ತ ನಗು ಬೀರಿ ಒಳಗೆ ಹೋದರು.

ವಾಟಾಳ್​ ನಾಗರಾಜ್​ ಮನೆ ಮೇಲೆ ಬ್ಯಾಂಕ್​ ಅಧಿಕಾರಿಗಳ ದಾಳಿ

ರೆಸಿಡೆನ್ಸಿ ರೋಡ್​ನಲ್ಲಿರುವ ವಿಜಯ ಬ್ಯಾಂಕ್​ನಿಂದ 12 ಲಕ್ಷ ಸಾಲ ಪಡೆದು, 5 -6 ವರ್ಷದಿಂದ ಸರಿಯಾಗಿ ಸಾಲ ಮರುಪಾವತಿ ಮಾಡಿಲ್ಲ. ಸಾಲ ಪಡೆದ ಒಪ್ಪಂದದಂತೆ 2017ರ ಜುಲೈ ತಿಂಗಳಿಗೇ ಸಾಲದ ಅವಧಿ ಮುಗಿದಿದೆ.

ಸಾಲ ಮರುಪಾವತಿ ಮಾಡುವಂತೆ ಹಲವು ಬಾರಿ ಬ್ಯಾಂಕ್​ ಅಧಿಕಾರಿಗಳು ನೋಟೀಸ್​ ನೀಡಿದ್ದರು. ಆದರೂ ವಾಟಾಳ್​​ ನಾಗರಾಜ್​ 5ವರ್ಷಗಳಿಂದ ವಿಳಂಬ ಮಾಡುತಿದ್ದ ಕಾರಣ ಇಂದು ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗಿದ್ದಾರೆ.

ಸಾಲ ಮರುಪಾವತಿ ಮಾಡದ ಕಾರಣ ಕೋರ್ಟ್​ನಿಂದ ಮನೆ ಜಪ್ತಿಗೆ ನೋಟೀಸ್ ಪಡೆದು, ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details