ಬೆಂಗಳೂರು : ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಮಾರ್ಟ್ ಸಿಟಿ ನಗರಗಳ ನಡುವೆ ಏರ್ಪಡಿಸಿದ್ದ 3 ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಎರಡು ಬಹುಮಾನಗಳನ್ನು ಪಡೆದುಕೊಂಡಿದೆ.
ಸ್ಮಾರ್ಟ್ ಸಿಟಿ ನಗರಗಳ ನಾಗರಿಕರಲ್ಲಿ ನಡಿಗೆ, ಓಟ ಮತ್ತು ಸೈಕಲ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ Freedom2Walk, Freedom2Run ಮತ್ತು Freedom2Cycle ಎಂಬ ಮೂರು ರೀತಿಯ ಸ್ಪರ್ಧೆಗಳನ್ನು ಜನವರಿ 1ರಿಂದ 26ರವರೆಗೆ ದೇಶದಾದ್ಯಂತ ನಡೆಸಲಾಗಿತ್ತು. ಇದರಲ್ಲಿ ನಡಿಗೆ ಮತ್ತು ಓಟದ ಸ್ಪರ್ಧೆಗಳಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ 'ಮುಂಚೂಣಿ ನಗರ' ( Front Runner City ) ಎಂಬ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ.