ಕರ್ನಾಟಕ

karnataka

ETV Bharat / city

ಅಬಕಾರಿ 'ಹಫ್ತಾ ವಸೂಲಿ' ಆರೋಪದ ಆಡಿಯೋ ಸತ್ಯಕ್ಕೆ ದೂರ; ಸಚಿವ ಗೋಪಾಲಯ್ಯ

ಹಫ್ತಾ ವಸೂಲಿ ಪ್ರಕರಣದ ಕುರಿತು ನಾನು ಏನು ಮಾತನಾಡಲ್ಲ. ಆಡಿಯೋದಲ್ಲಿ ಯಾರು ಮಾತನಾಡಿದ್ದಾರೋ ಆ ಬಗ್ಗೆ ತನಖೆಯಾಗಲಿ. ಈಗಾಗಲೇ ಈ ಸಂಬಂಧ ತನಿಖೆಗೆ ಆದೇಶ ನೀಡಿದ್ದೇನೆ. ತೇಜೋವಧೆ ಮಾಡುವ ನಿಟ್ಟಿನಲ್ಲಿ ಹೀಗೆ ಮಾಡಿರಬಹುದು ಎಂದು ಸಚಿವ ಗೋಪಾಲಯ್ಯ ಅವರು ಹೇಳಿದರು.

audio-allegation-by-bride-is-far-from-true
ಸಚಿವ ಗೋಪಾಲಯ್ಯ

By

Published : Jun 21, 2021, 8:02 PM IST

ಬೆಂಗಳೂರು: ಪ್ರತೀ ಜಿಲ್ಲೆಯಿಂದ ಐದು ಲಕ್ಷ ರೂ. ಹಫ್ತಾ ನೀಡುವಂತೆ ಸಚಿವರಿಂದ ಒತ್ತಡ ಇದೆ ಎಂಬ ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರ ಆಡಿಯೋ ಸಂಭಾಷಣೆಯಲ್ಲಿನ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.‌

ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಆರೋಪ ಸತ್ಯಕ್ಕೆ ದೂರವಾಗಿದೆ, ಈ ಬಗ್ಗೆ ನಾನು ಏನೂ ಮಾತನಾಡಲ್ಲ. ಆಡಿಯೋದಲ್ಲಿ ಯಾರು ಮಾತನಾಡಿದ್ದಾರೋ ಆ ಬಗ್ಗೆ ತನಿಖೆಯಾಗಲಿ. ಈಗಾಗಲೇ ಈ ಸಂಬಂಧ ತನಿಖೆಗೆ ಆದೇಶ ನೀಡಿದ್ದೇನೆ. ತೇಜೋವಧೆ ಮಾಡುವ ನಿಟ್ಟಿನಲ್ಲಿ ಹೀಗೆ ಮಾಡಿರಬಹುದು. ಆದರೆ ಆಡಿಯೋದಲ್ಲಿ ನಾನು ಮಾತನಾಡಿರೋ ಬಗ್ಗೆ ಪುರಾವೆ ಇದೆಯಾ ಎಂದು ಪ್ರಶ್ನಿಸಿದರು.‌

ಇದು ಯಾರೋ ಮಾಡಿರೋ ಷಡ್ಯಂತ್ರ. ತನಿಖೆಯಾದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಅಬಕಾರಿ ಆಯುಕ್ತರಿಂದ ಈ ಕುರಿತಾಗಿ ತನಿಖೆ ಮಾಡಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಇದೇ ವೇಳೆ ರಮೇಶ್ ಜಾರಕಿಹೊಳಿ, ದೇವೇಂದ್ರ ಫಡ್ನವಿಸ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಪಕ್ಷ ಇದೆ, ಕಮಿಟಿ ಇದೆ, ಏನೆ ಇದ್ರೂ ಅಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ABOUT THE AUTHOR

...view details