ಕರ್ನಾಟಕ

karnataka

ETV Bharat / city

ಬಿಟ್ ಕಾಯಿನ್ ಪ್ರಕರಣದ ಕಾಂಗ್ರೆಸ್ ದಾಖಲೆ ಬಿಡುಗಡೆ ಫ್ಲಾಪ್ ಶೋ ಆಗಲಿದೆ : ಸಚಿವ ಅಶ್ವತ್ಥ್ ನಾರಾಯಣ - karnataka bitcoin scam issue

ಬಿಟ್ ಕಾಯಿನ್ ಪ್ರಕರಣ (BitCoin Scam) ಸಂಬಂಧ ಈಗಾಗಲೇ ಸಿಸಿಬಿ ವಿಚಾರಣೆ ಮಾಡಿದೆ. ಕೇಂದ್ರದ ಏಜೆನ್ಸಿಗಳು, ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಾಗಿ ಏನು ಹೇಳೋಕೆ ಆಗಲ್ಲ. ಪ್ರತಿಪಕ್ಷಗಳು ದಾಖಲೆ ಇದ್ದರೆ ಹೊರಗಡೆ ತರಬಹುದು..

ashwath-narayan-reaction-on-bitcoin-congress-statement
ಸಚಿವ ಅಶ್ವತ್ಥ್ ನಾರಾಯಣ್

By

Published : Nov 12, 2021, 8:01 PM IST

ಬೆಂಗಳೂರು :ಬಿಟ್ ಕಾಯಿನ್ ಹಗರಣ (Bitcoin scam) ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ (Randeep Surjewala) ದಾಖಲೆ ಬಿಡುಗಡೆ ಶೋ ಫ್ಲಾಪ್ ಆಗಲಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ (CN Ashwath Narayan) ಲೇವಡಿ ಮಾಡಿದರು‌.

ಬಿಟ್ ಕಾಯಿನ್ ಕಾಂಗ್ರೆಸ್ ದಾಖಲೆ ಬಿಡುಗಡೆ ಕುರಿತು ಸಚಿವ ಅಶ್ವತ್ಥ್​ ನಾರಾಯಣ ಪ್ರತಿಕ್ರಿಯೆ ನೀಡಿರುವುದು..

ನಗರದ ಖಾಸಗಿ ಹೋಟೆಲ್​ನಲ್ಲಿ ಮಾತನಾಡಿದ ಅವರು, ಸುರ್ಜೇವಾಲ ಏನು ದಾಖಲೆ ಬಿಡುಗಡೆ ಮಾಡ್ತಾರೆ ಅಂತಾ ಕಾಯ್ದು ನೋಡೋಣ. ಅದು ಫ್ಲಾಪ್‌ಶೋ. ನಾವು ಭಾನುವಾರವನ್ನ ಎದುರು ನೋಡುತ್ತಿದ್ದೇವೆ ಎಂದರು.

ಬಿಟ್ ಕಾಯಿನ್ ಪ್ರಕರಣ ಸಂಬಂಧ ಈಗಾಗಲೇ ಸಿಸಿಬಿ ವಿಚಾರಣೆ ಮಾಡಿದೆ. ಕೇಂದ್ರದ ಏಜೆನ್ಸಿಗಳು, ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಾಗಿ ಏನು ಹೇಳೋಕೆ ಆಗಲ್ಲ. ಪ್ರತಿಪಕ್ಷಗಳು ದಾಖಲೆ ಇದ್ದರೆ ಹೊರಗಡೆ ತರಬಹುದು.

ತನಿಖೆ ಪಾರದರ್ಶಕವಾಗಿ ನಡೆಯಲಿದೆ. ಸಾರ್ವಜನಿಕವಾಗಿ ಏನೇನು ಒದಗಿಸಬೇಕು ಅದನ್ನೆಲ್ಲ ಒದಗಿಸಿದ್ದೇವೆ. ಯಾರಾದರೂ ಇರಲಿ ನ್ಯಾಯಸಮ್ಮತವಾಗಿ ತನಿಖೆ ‌ನಡೆಯುತ್ತದೆ ಎಂದರು.

ABOUT THE AUTHOR

...view details