ಬೆಂಗಳೂರು: ರಿಯಾಯಿತಿ ದರದಲ್ಲಿ ವಿದೇಶಿ ಪ್ರವಾಸಕ್ಕೆ ಕರೆದೊಯ್ಯುದಾಗಿ ಭರವಸೆ ನೀಡಿ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು, ವಂಚಿಸಿದ್ದ ವ್ಯಕ್ತಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಕಡಿಮೆ ಬೆಲೆಯಲ್ಲಿ ವಿದೇಶಿ ಪ್ರವಾಸ ಎಂದು ಗ್ರಾಹಕರಿಗೆ ಕಾಗೆ ಹಾರಿಸಿದ ಆರೋಪಿ ಅರೆಸ್ಟ್ - ಗ್ರಾಹಕರಿಗೆ ಟೋಪಿ
ರಿಯಾಯಿತಿ ದರದಲ್ಲಿ ವಿದೇಶಿ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿ, ಗ್ರಾಹಕರಿಂದ ಲಕ್ಷಾಂತರ ರೂ.ಹಣ ಪಡೆದು ವಂಚಿಸಿದ್ದ ವ್ಯಕ್ತಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಘನಶ್ಯಾಮ್ ಬಂಧಿತ ಆರೋಪಿ. ಹಲವು ವರ್ಷಗಳಿಂದ ಡಿವಿಜಿ ರಸ್ತೆಯಲ್ಲಿ ಟ್ರಾವೆಲ್ಸ್ ಇಟ್ಟಕೊಂಡಿದ್ದ. ಇದೇ ವರ್ಷ ಫೆಬ್ರುವರಿಯಲ್ಲಿ ಪರಿಚಿತ ಗ್ರಾಹಕರಿಗೆ ಕರೆ ಮಾಡಿ, ಕಡಿಮೆ ಬೆಲೆಯಲ್ಲಿ ಯುರೋಪ್ ಪ್ರವಾಸದ ಪ್ಯಾಕೇಜ್ ಇದೆ. ಮೇ 12 ರಂದು ಪ್ರವಾಸಕ್ಕೆ ಹೋಗಬೇಕಾಗಿದೆ. ಮುಂಗಡವಾಗಿ ಹಣ ನೀಡಬೇಕೆಂದು ನಂಬಿಸಿ 10 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದ. ಇದಕ್ಕೆ ರಶೀದಿಯನ್ನೂ ಸಹ ನೀಡಿದ್ದ ಎನ್ನಲಾಗ್ತಿದೆ.
ಆದ್ರೆ ಪ್ರವಾಸದ ದಿನ ಹತ್ತಿರವಾದರೂ ಟೂರ್ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲವಂತೆ. ಜೊತೆಗೆ ಪ್ರವಾಸ ಮುಂದೂಡಿಕೆಯಾಗಿರುವುದಾಗಿ ಹಲವು ಬಾರಿ ಗ್ರಾಹಕರಿಗೆ ಸತಾಯಿಸಿದ್ದಾನೆ. ಆಗ ಈತನ ಮೇಲೆ ಅನುಮಾನಗೊಂಡ ಗ್ರಾಹಕ ಕೆಂಪರಾಜು ಎಂಬುವರು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.