ಕರ್ನಾಟಕ

karnataka

ETV Bharat / city

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​ - ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಗ್ರಾಮ ಪಂಚಾಯತಿ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದ ಕೆಪಿಸಿಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ.

Appointment in charge of local agency elections
ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

By

Published : Dec 5, 2020, 7:44 PM IST

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯತಿ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದ ಕೆಪಿಸಿಸಿ, ಪ್ರಸ್ತುತ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಪಕ್ಷಕ್ಕೆ ಶಕ್ತಿ ತುಂಬಲು ಸಹಕಾರಿಯಾಗುವಂತೆ ಈ ಕೆಳಕಂಡ ಮುಖಂಡರುಗಳಿಗೆ ವಿಧಾನಸಭಾ ಕ್ಷೇತ್ರವಾರು ಚುನಾವಣೆ ಜವಾಬ್ದಾರಿಯನ್ನು ನೀಡಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

ಈ ಎಲ್ಲ ಮುಖಂಡರುಗಳು ನಿಯೋಜಿತ ಕ್ಷೇತ್ರಗಳಿಗೆ ಸಂಬಂಧಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಸಂಸದರು, ಮಾಜಿ ಸಂಸದರು, 2019ರ ಲೋಕಸಭಾ ಅಭ್ಯರ್ಥಿಗಳು, ಶಾಸಕರು, 2018ರ ವಿಧಾನಸಭೆ ಅಭ್ಯರ್ಥಿಗಳು, ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಜಿಲ್ಲಾ ತಾಲೂಕು ಪಂಚಾಯಿತಿ ಪ್ರತಿನಿರ್ಧಿಗಳು ಹಾಗೂ ಇತರ ಎಲ್ಲಾ ಸ್ಥಳೀಯ ಮುಖಂಡರುಗಳ ಸಹಕಾರದೊಂದಿಗೆ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿ ಎಂದಿದ್ದಾರೆ.

ಯಾರ್ಯಾರು ಎಲ್ಲೆಲ್ಲಿ ನೇಮಕ
ವಿಧಾನಸಭೆ ಕ್ಷೇತ್ರವಾರು ನಾಯಕರನ್ನ ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್ಆರ್ ಪಾಟೀಲ್, ಮಾಜಿ ಸಚಿವೆ ಉಮಾಶ್ರೀ, ಎಚ್.ವೈ.ಮೇಟಿ, ಶಾಸಕ ಆನಂದ ನ್ಯಾಮಗೌಡ, ಮಾಜಿ ಶಾಸಕರಾದ ಜೆ.ಟಿ.ಪಾಟೀಲ್, ವಿಜಯಾನಂದ ಕಾಶಪ್ಪನವರ್ ನೇಮಕಗೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ವಿಧಾನಸಭೆ ಕ್ಷೇತ್ರಕ್ಕೆ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ,ವಿಧಾನ ಪರಿಷತ್ ಕಾಂಗ್ರೆಸ್ ಮುಖ್ಯಸಚೇತಕ ಎನ್​.ನಾರಾಯಣಸ್ವಾಮಿ, ಶಾಸಕರಾದ ಬಿ.ಶಿವಣ್ಣ, ಭೈರತಿ ಸುರೇಶ್, ಎಸ್.ರವಿ, ಮಾಜಿ ಸಚಿವ ವೆಂಕಟರಮಣಯ್ಯ ನೇಮಕಗೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

ಬೆಳಗಾವಿ ಜಿಲ್ಲೆ ವ್ಯಾಪ್ತಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ, ಸಂಸದ ಡಾ ಎಲ್ ಹನುಮಂತಯ್ಯ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಸಾದ್ ಅಬ್ಬಯ್ಯ ಮಹಾಂತೇಶ್ ಕೌಜಲಗಿ ನಿಂಬಾಳ್ಕರ್, ಮಾಜಿ ಸಚಿವರಾದ ಎಂಬಿ ಪಾಟೀಲ್ ಪ್ರಕಾಶ್ ಬಿ ಹುಕ್ಕೇರಿ ಎಬಿ ಪಾಟೀಲ್ ವೀರಕುಮಾರ್ ಪಾಟೀಲ್, ಮಾಜಿ ಶಾಸಕ ಫಿರೋಜ್ ಸೇಠ್, ಪಿ ಎಂ ಅಶೋಕ್ ನೇಮಕಗೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಶಾಸಕರಾದ ನಾಗೇಂದ್ರ, ಭೀಮಾನಾಯಕ್, ಗಣೇಶ್, ನಾಗೇಂದ್ರ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯಕ್, ಈ ತುಕಾರಾಂ, ಮಾಜಿ ಸಂಸದ ವಿ.ಎಸ್​.ಉಗ್ರಪ್ಪ, ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ನಾಗರಾಜ್ ನೇಮಕ ಗೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

ಬೀದರ್ ಜಿಲ್ಲೆಯ ವ್ಯಾಪ್ತಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ರಾಜಶೇಖರ್ ಪಾಟೀಲ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಶಾಸಕರಾದ ರಹಿಂಖಾನ್ ಹಾಗೂ ವಿಜಯಸಿಂಗ್ ನೇಮಕಗೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

ವಿಜಯಪುರ ಜಿಲ್ಲಾ ವ್ಯಾಪ್ತಿಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವರಾದ ಶಿವಾನಂದ ಪಾಟೀಲ್, ಅಪ್ಪಾಜಿ ನಾಡಗೌಡ, ಮಾಜಿ ಶಾಸಕರಾದ ರಾಜು ಅಲಗೂರು, ವಿಠ್ಠಲ್ ಕಟಕದೊಂಡ, ಶಾಸಕ ಯಶವಂತರಾಯಗೌಡ ಪಾಟೀಲ್, ಅಬ್ದುಲ್ ಹಮೀದ್ ಮುಷರಫ್ ನೇಮಕಗೊಂಡಿದ್ದಾರೆ.

ಚಾಮರಾಜನಗರ ಜಿಲ್ಲಾ ವ್ಯಾಪ್ತಿಗೆ ಮಾಜಿ ಶಾಸಕ ಕೃಷ್ಣಮೂರ್ತಿ, ನರೇಂದ್ರ, ಮಾಜಿ ಸಚಿವ ಪುಟ್ಟರಂಗಶೆಟ್ಟಿ, ವಿಧಾನಪರಿಷತ್ ಸದಸ್ಯ ಧರ್ಮಸೇನ ನೇಮಕಗೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ವಿಆರ್ ಸುದರ್ಶನ್, ವಿಧಾನಸಭಾ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವರಾದ ಎಂ.ಎಚ್​.ಶಿವಶಂಕರ್ ರೆಡ್ಡಿ, ವಿ.ಮುನಿಯಪ್ಪ ಹಾಗೂ ಶಾಸಕ ಸುಬ್ಬಾರೆಡ್ಡಿ ನೇಮಕಗೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

ಚಿಕ್ಕಮಗಳೂರು ವ್ಯಾಪ್ತಿಗೆ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್​.ಶಂಕರ್, ಕೇಂದ್ರದ ಮಾಜಿ ಸಚಿವೆ ತಾರಾದೇವಿ ಸಿದ್ಧಾರ್ಥ, ಮಾಜಿ ಸಚಿವೆ ಮೋಟಮ್ಮ, ಶಾಸಕ ರಾಜೇಗೌಡ, ಮಾಜಿ ಎಂಎಲ್​ಸಿ ಗಾಯತ್ರಿ ಶಾಂತೇಗೌಡ ನೇಮಕಗೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಗೆ ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ರಘುಮೂರ್ತಿ, ಮಾಜಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ ರಘು ಆಚಾರ್ ಹಾಗೂ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ನೇಮಕಗೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

ಧಾರವಾಡ ಜಿಲ್ಲಾ ವ್ಯಾಪ್ತಿಗೆ ಮಾಜಿ ಸಂಸದ ಐ.ಜಿ.ಸನದಿ, ಶಾಸಕಿ ಕುಸುಮಾವತಿ, ಶಿವಳ್ಳಿ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ನೇಮಕಗೊಂಡಿದ್ದಾರೆ.

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಎಸ್​.ಎಸ್​.ಮಲ್ಲಿಕಾರ್ಜುನ್, ಶಾಸಕ ಟಿ.ರಾಮಪ್ಪ, ಸಂಜೆ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಡಿ.ಜಿ.ಶಾಂತನಗೌಡ ಹಾಗೂ ಕೆ.ಅಬ್ದುಲ್ ಜಬ್ಬಾರ್ ನೇಮಕಗೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದ ಕಾಂಗ್ರೆಸ್​

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಸಚಿವ ಯು.ಟಿ.ಖಾದರ್, ಅಭಯಚಂದ್ರ ಜೈನ್, ಮಾಜಿ ಶಾಸಕ ಐವಾನ್​ ಡಿಸೋಜ, ಜೆ.ಆರ್​.ಲೋಬೋ ಮಿಥುನ್ ರೈ, ಮೊಹಿದ್ದೀನ್ ಬಾವ ನೇಮಕಗೊಂಡಿದ್ದಾರೆ.

ಗದಗ ಜಿಲ್ಲಾ ವ್ಯಾಪ್ತಿಗೆ ಮಾಜಿ ಸಚಿವ ಎಚದದ.ಕೆ.ಪಾಟೀಲ್, ಮಾಜಿ ಶಾಸಕರಾದ ಡಿ.ಆರ್​.ಪಾಟೀಲ್, ಜಿ.ಎಸ್.ಪಾಟೀಲ್ ಆಯ್ಕೆಯಾಗಿದ್ದಾರೆ.

ಕಲಬುರಗಿ ಜಿಲ್ಲಾ ವ್ಯಾಪ್ತಿಗೆ ಮಾಜಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಮಾಜಿ ಸಚಿವ ಬಿ.ಆರ್.ಪಾಟೀಲ್, ಪ್ರಿಯಾಂಕ ಖರ್ಗೆ, ಶಾಸಕ ಎಂ.ವೈ.ಪಾಟೀಲ್ ,ಅಜಯ್ ಸಿಂಗ್, ಅಲ್ಲಮಪ್ರಭು ಪಾಟೀಲ್, ಕಾಂಸಿಸ್ ಫಾತಿಮಾ ಆಯ್ಕೆಯಾಗಿದ್ದಾರೆ.

ಹಾಸನ ಜಿಲ್ಲಾ ವ್ಯಾಪ್ತಿಗೆ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಸಂಸದ ಜವರೇಗೌಡ, ಮಾಜಿ ಸಚಿವ ಬಿ ಶಿವರಾಂ, ಕೃಷ್ಣೇಗೌಡ, ಎಂಎಲ್​ಸಿ ನಾಸೀರ್ ಅಹಮ್ಮದ್, ಎಂ.ಎ.ಗೋಪಾಲಸ್ವಾಮಿ, ಮಾಜಿ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ನಾಗೇಂದ್ರಸ್ವಾಮಿ ನೇಮಕಗೊಂಡಿದ್ದಾರೆ.

ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಮಾಜಿ ಸಚಿವ ಕೆ.ಬಿ.ಕೋಳಿವಾಡ, ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣವರ, ಜಮೀರ್ ಅಹಮದ್ ಖಾನ್, ಶ್ರೀನಿವಾಸ್ ಮಾನೆ ಹಾಗೂ ಎಸ್ಆರ್ ಪಾಟೀಲ್ ನೇಮಕಗೊಂಡಿದ್ದಾರೆ.

ಇದೇ ರೀತಿ ಕೊಡಗು, ಕೋಲಾರ, ಕೊಪ್ಪಳ, ಮೈಸೂರು, ಮಂಡ್ಯ ರಾಯಚೂರು ರಾಮನಗರ ಶಿವಮೊಗ್ಗ ತುಮಕೂರು ಉಡುಪಿ ಉತ್ತರ ಕನ್ನಡ ಯಾದಗಿರಿ ಜಿಲ್ಲೆಗಳಿಗೂ ಮುಖಂಡರನ್ನು ನೇಮಿಸಿ ಕಾಂಗ್ರೆಸ್ ಪಕ್ಷ ಆದೇಶ ಹೊರಡಿಸಿದೆ.

ABOUT THE AUTHOR

...view details