ಬೆಂಗಳೂರು : ಬೇಸಿಗೆ ಕಾರ್ಯಾಚರಣೆಯೆಂದರೆ ಸಾರಿಗೆ ವಿಭಾಗಕ್ಕೆ ಸುಗ್ಗಿಯ ಕಾಲದಷ್ಟೇ ಸಂಭ್ರಮ. ಆದರೆ, ಕೋವಿಡ್‍ನಿಂದಾಗಿ ಕಳೆದ ಮೂರು ವರ್ಷಗಳಿಂದ ಬೇಸಿಗೆ ಕಾರ್ಯಾಚರಣೆಯನ್ನು ಸಂಭ್ರಮಿಸಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ವಾತಾವರಣ ತಿಳಿಯಾಗಿದ್ದು, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳು ಹಾಗೂ ಸಮಾರಂಭಗಲೂ ಗರಿಗೆದರಿವೆ.
ಸಾರ್ವಜನಿಕ ಪ್ರಯಾಣಿಕರು ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಶುರು ಮಾಡಿದ್ದಾರೆ. ಏಪ್ರಿಲ್ 14 ರಿಂದ 17ರವರೆಗೆ ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಸೌರಯುಗಾದಿ, ಗುಡ್ ಫ್ರೈಡೇ, ಹೋಲಿ ಸ್ಯಾಟರ್‍ಡೇ ಮುಂತಾದ ಸಾಲು ಸಾಲು ಸಾರ್ವತ್ರಿಕ ರಜೆ ಮತ್ತು ವಾರಾಂತ್ಯದ ರಜೆಗಳು ಇವೆ. ಈ ಹಿನ್ನೆಲೆಯಲ್ಲಿ ರಾಜ್ಯದೊಳಗೆ ಮತ್ತು ಅಂತಾರಾಜ್ಯ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 200 ಬಸ್‌ಗಳು ಕಾರ್ಯಾಚರಿಸಲಿವೆ. ಈ ಕುರಿತು ಕೆಎಸ್ಆರ್ಟಿಸಿ ಪ್ರಕಟಣೆ ಹೊರಡಿಸಿದೆ.
ಎಲ್ಲೆಲ್ಲಿಗೆ? :
- ಕೇರಳ ರಾಜ್ಯದ ಎರ್ನಾಕುಲಂ, ಕಣ್ಣೂರು, ಕೊಟ್ಟಾಯಂ, ತ್ರಿಶೂರು, ಪಾಲಕ್ಕಾಡ್, ತ್ರಿವೇಂಡ್ರಮ್, ಕ್ಯಾಲಿಕಟ್, ಕಾಸರಗೋಡು ಮತ್ತು ಇತರೆ ಸ್ಥಳಗಳು
- ತಮಿಳುನಾಡು ರಾಜ್ಯದ ಕೊಯಬತ್ತೂರು, ಕೊಡೈಕೆನಾಲ್, ತಂಜಾವುರು, ಮಧುರೈ, ಊಟಿ, ಸೇಲಂ, ತಿರುಚಿ, ವಿಳ್ಳುಪುರಂ
- ಆಂದ್ರಪದೇಶ ಹಾಗೂ ತೆಲಂಗಾಣ ರಾಜ್ಯಗಳ ಮಂತ್ರಾಲಯ, ವಿಜಯವಾಡ, ಹೈದರಾಬಾದ್, ನೆಲ್ಲೂರು ಗೋವಾದ ಪಣಜಿ
- ಮಹಾರಾಷ್ಟ್ರದ ಶಿರಡಿ ಮತ್ತು ಪಾಂಡಿಚೇರಿ ಸ್ಥಳಗಳಿಗೆ ವಿಶೇಷ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.