ದೇವನಹಳ್ಳಿ: ಭಾರತದಲ್ಲಿ ಮತ್ತೊಂದು ಹೊಸ ವಿಮಾನಯಾನ ಸಂಸ್ಥೆ ಆಕಾಶ್ ಏರ್ಲೈನ್ಸ್ ತನ್ನ ಸೇವೆಯನ್ನ ಆರಂಭಿಸಿದ್ದು, ಮೊದಲ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ಬಂದಿಳಿಯಿತು.
ಉದ್ಯಮಿ ರಾಕೇಶ್ ಝುಂಝುನ್‌ವಾಲಾ ಮಾಲೀಕತ್ವದ ಆಕಾಶ್ ಏರ್ಲೈನ್ಸ್ ಸಂಸ್ಥೆ ಭಾರತದಲ್ಲಿ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ಆಗಸ್ಟ್ 7ರಂದು ಮುಂಬೈನಿಂದ ಅಹಮದಾಬಾದ್ಗೆ ಮೊದಲ ವಿಮಾನ ಸಂಚಾರಿಸುವ ಮೂಲಕ ತನ್ನ ಸೇವೆ ಆರಂಭಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಕಾಶ್ ಏರ್ ಲೈನ್ಸ್ನ ಮೊದಲ ವಿಮಾನ ಬುಧವಾರ ಲ್ಯಾಂಡ್ ಆಗಿದೆ. ಇನ್ನು ಆ.19 ರಂದು ಬೆಂಗಳೂರಿನಿಂದ ಮುಂಬೈಗೆ ಆಕಾಶ್ ಏರ್ಲೈನ್ಸ್ ಸಂಚರಿಸುವ ಮೂಲಕ ಕೆಐಎಎಲ್ನಿಂದ ಸೇವೆ ಆರಂಭಿಸಲಿದೆ.