ಕರ್ನಾಟಕ

karnataka

ETV Bharat / city

ಬೆಂಗಳೂರು ಕೃಷಿ ವಿವಿ ಆವರಣದಲ್ಲಿ ನವೆಂಬರ್ 11ರಿಂದ ಕೃಷಿ ಮೇಳ - ಬೆಂಗಳೂರು ಕೃಷಿ ವಿವಿ

ನವೆಂಬರ್ 11 ರಿಂದ 14ರವರೆಗೆ 4 ದಿನಗಳ ಕಾಲ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ( ಜಿಕೆವಿಕೆ) ಆವರಣದಲ್ಲಿ ಕೃಷಿ ಮೇಳ-2021 ಆಯೋಜಿಸಲಾಗಿದೆ.

agri vv
agri vv

By

Published : Nov 9, 2021, 6:46 PM IST

ಯಲಹಂಕ:ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ಆವರಣದಲ್ಲಿ ನವೆಂಬರ್ 11 ರಿಂದ 14ರ ವರೆಗೆ 4 ದಿನಗಳ ಕಾಲ ಕೃಷಿ ಮೇಳ-2021 ನಡೆಯಲಿದೆ. ಈ ಬಾರಿ ಕೃಷಿ ಮೇಳದಲ್ಲಿ 10 ಹೊಸ ತಳಿಗಳು ಮತ್ತು 28 ತಂತ್ರಜ್ಞಾನಗಳ ಬಿಡುಗಡೆಯಾಗಲಿವೆ.

ಯಲಹಂಕ ಬಳಿಯ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು (ಜಿಕೆವಿಕೆ) ಆವರಣದಲ್ಲಿ ಕೃಷಿ ಮೇಳ -2021 ಅಯೋಜನೆ ಮಾಡಲಾಗಿದ್ದು, ನವೆಂಬರ್ 11ರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಗಣ್ಯರಿಂದ ರೈತ ಸಾಧಕರಿಗೆ ಕೃಷಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

10 ನೂತನ ತಳಿಗಳು, 28 ಕೃಷಿ ತಂತ್ರಜ್ಞಾನಗಳ ಬಿಡುಗಡೆ:

ಕೃಷಿ ಮೇಳ -2021ರ ಪ್ರಮುಖ ಆಕರ್ಷಣೆ 10 ನೂತನ ತಳಿಗಳು ಸೇರಿದಂತೆ 28 ಕೃಷಿ ತಂತ್ರಜ್ಞಾನಗಳು ಬಿಡುಗಡೆ ಆಗಲಿವೆ. ಕೆಂಪು ಬಣ್ಣದ ಅಕ್ಕಿಯನ್ನು ಒಳಗೊಂಡಿರುವ ಕೆಎಂಪಿ-220 ಭತ್ತದ ತಳಿ, ಗಟ್ಟಿ ಕಾಂಡ ಮತ್ತು ನೇರವಾಗಿ ಬೆಳೆಯುವ ಎಂಎಸ್ ಎನ್ ಭತ್ತದ ತಳಿ, ಮುಂಗಾರು ಮತ್ತು ತಡವಾದ ಮುಂಗಾರಿಗೆ ಸೂಕ್ತವಾದ ಕೆಎಂಆರ್ 316 ರಾಗಿ ತಳಿ, ಮುಂಗಾರು ಮಳೆಯಾಶ್ರಿತ ಮತ್ತು ಬೇಸಿಗೆಗೆ ಸೂಕ್ತವಾದ ಜೆಪಿಯುಪಿ 28 ಬರಗು ತಳಿ, ದಟ್ಟವಾದ ಮತ್ತು ಉದ್ದನೆ ತೆನೆಯ ಜೆಪಿಯುಎಫ್ 3 ನವಣೆ ತಳಿ, ಎಲೆ ಅಂಗಮಾರಿ ರೋಗಕ್ಕೆ ನಿರೋಧಕ ಶಕ್ತಿಯ ಜೆಪಿಯುಎಲ್ 6 ಸಾಮೆ ತಳಿ, ಮಿಶ್ರ ಬೆಳೆ ಮತ್ತು ಅಂತರ ಬೆಳೆಗೆ ಸೂಕ್ತವಾದ ಕೆಬಿಜಿಎ 15 ಬೀಜದ ದಂಟು, ಹೆಚ್ಚು ತೆಂಡೆ ಹೊಡೆಯುವ ಗುಣವುಳ್ಳ ಸಿಓವಿಸಿ 18061 ಕಬ್ಬು ತಳಿ, ವರ್ಷಕ್ಕೆ ಎರಡು ಬಾರಿ ಫಲ ಕೊಡುವ ಬೈರಚಂದ್ರ ಹಲಸು ತಳಿ, ಉತ್ತಮ ಮೇವಿನ ಜೀರ್ಣತೆ ಗುಣವುಳ್ಳ ಆರ್​​ಓ 11-1 ತಳಿಯ ಮೇವಿನ ತೋಕೆ ಗೋಧಿ ಕೃಷಿ ಮೇಳದ ಪ್ರದರ್ಶನದಲ್ಲಿರಲಿವೆ.

28 ಕೃಷಿ ತಂತ್ರಜ್ಞಾನಗಳ ಬಿಡುಗಡೆ:

ಬೆಳೆ ಅಭಿವೃದ್ಧಿ-05, ಬೆಳೆ ಉತ್ಪಾದನೆ- 08, ಬೆಳೆ ಸಂರಕ್ಷಣೆ-10 , ರೇಷ್ಮೆ ಕೃಷಿ-3, ಜೇನು ಕೃಷಿ -1, ಕೃಷಿ ಇಂಜಿನಿಯರಿಂಗ್-1 ತಂತ್ರಜ್ಞಾನಗಳನ್ನ ಈ ಬಾರಿ ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ABOUT THE AUTHOR

...view details