ಕರ್ನಾಟಕ

karnataka

ETV Bharat / city

ಉದ್ಯಾನ ನಗರಿಯಲ್ಲಿ ಮತ್ತೆ ಮಳೆ.. ಪಟಾಕಿ ಪ್ರೇಮಿಗಳ ಉತ್ಸಾಹವೇ ಠುಸ್‌.... - ಸಖತ್ ಪಟಾಕಿ ಹೊಡೆದು

ದೀಪಾವಳಿ ಹಬ್ಬ ಈ ಬಾರಿ ಸಖತ್ ಪಟಾಕಿ ಹೊಡೆದು, ಮಸ್ತ್ ಮಜಾ ಮಾಡಬೇಕು ಎಂದುಕೊಂಡವರಿಗೆ ಮಳೆರಾಯ ಅಡ್ಡಗಾಲು ಹಾಕಿದ್ದಾನೆ.

again-heavy-rain-in-bangalore

By

Published : Oct 27, 2019, 10:37 PM IST

ಬೆಂಗಳೂರು:ದೀಪಾವಳಿ ಹಬ್ಬ ಈ ಬಾರಿ ಸಖತ್ ಪಟಾಕಿ ಹೊಡೆದು, ಮಸ್ತ್ ಮಜಾ ಮಾಡಬೇಕು ಎಂದುಕೊಂಡವರಿಗೆ ಮಳೆರಾಯ ಅಡ್ಡಗಾಲು ಹಾಕಿದ್ದಾನೆ.

ಬೆಳಗ್ಗೆ ಹೊತ್ತು ಬಿಸಿಲು ಇತ್ತು. ಸಂಜೆ ಆಗುತ್ತಿದ್ದಂತೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಾಪಿಂಗ್ ಮಾಡಲು ತುದಿಗಾಲಿನಲಿ ನಿಂತಿದ್ದ ಸಿಲಿಕಾನ್ ಸಿಟಿ ಜನರಿಗೆ ನಿರಾಸೆಯಾಗಿದೆ.

ಉದ್ಯಾನ ನಗರಿಯಲ್ಲಿ ಮತ್ತೆ ಮಳೆ

ನಗರದ ಮೆಜೆಸ್ಟಿಕ್, ಕಾಟನ್ ಪೇಟೆ, ರೇಸ್​ಕೋರ್ಸ್, ಶಿವಾನಂದ ಸರ್ಕಲ್ ಸೇರಿ ವಿಧಾನಸೌಧ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.ಸಂಜೆ ಮೇಲೆ ಪಟಾಕಿ ಸಿಡಿಸಲು ಪ್ಲಾನ್ ಹಾಕಿಕೊಂಡವರಿಗೆ ಮಳೆರಾಯ ಶಾಕ್​ ನೀಡಿದ್ದಾನೆ. ಇತ್ತ ವಾರಾಂತ್ಯದ ಕಾರಣ ಸಂಚಾರ ದಟ್ಟಣೆ ಕೂಡ ಕಡಿಮೆ‌ ಇದೆ.

ABOUT THE AUTHOR

...view details