ಬೆಂಗಳೂರು: ಬೆಳ್ಳಂ ಬೆಳಗ್ಗೆ ಸುಮಾರು 5 ಗಂಟೆಗೆ ನಟ ಪುನೀತ್ ರಾಜ್‍ಕುಮಾರ್ ಪಾರ್ಥಿವ ಶರೀರ ಕಂಠೀರವ ಕ್ರೀಡಾಂಗಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಶರವೇಗದಲ್ಲಿ ಹಾದು ಸ್ಟುಡಿಯೋ ತಲುಪಿತು.
ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಗಳಿದ್ದಿದ್ದರಿಂದ, ಸಂಚಾರ ಪೊಲೀಸರು ಸಾರ್ವಜನಿಕರ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದರು. ಅಭಿಮಾನಿಗಳು ಕೊನೆಯದಾಗಿ ಅಂತಿಮ ದರ್ಶನ ಪಡೆಯಲೆಂದು ಕಂಠೀರವ ಕ್ರೀಡಾಂಗಣದತ್ತ ಧಾವಿಸಿದ್ದರೂ ಪೊಲೀಸರು ಯಾರನ್ನೂ ಒಳ ಬಿಡಲಿಲ್ಲ. ಕಂಠೀರವ ಸ್ಟುಡಿಯೋವರೆಗೆ (13 ಕಿ.ಮೀ. ದೂರ) ಅಪ್ಪು ಪಾರ್ಥಿವ ಶರೀರ ಮೆರವಣಿಗೆ ಅತಿ ವೇಗದಲ್ಲಿ ಸಾಗಿತು. ಕ್ರೀಡಾಂಗಣದಿಂದ ಸ್ಟುಡಿಯೋಗೆ ಸುಮಾರು 30 ರಿಂದ 40 ನಿಮಿಷದಲ್ಲಿ ತಲುಪಿತು.
ಪಾರ್ಥಿವ ಶರೀರ ತೆಗೆದುಕೊಂಡು ಹೋದ ಮಾರ್ಗ:
ಕಂಠೀರವ ಕ್ರೀಡಾಂಗಣ ಹಿಂಭಾಗದ ದ್ವಾರದಲ್ಲಿ ಮೆರವಣಿಗೆ ಪ್ರಾರಂಭಿಸಿ, ಆರ್ಆರ್ಎಂಆರ್ ರಸ್ತೆ, ಹಡ್ಸನ್ ವೃತ್ತ, ಪೊಲೀಸ್ ಕಾರ್ನರ್, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್. ವೃತ್ತದಲ್ಲಿ ಎಡಕ್ಕೆ ತಿರುಗಿ ಶೇಷಾದ್ರಿ ರಸ್ತೆ, ಮಹಾರಾಣಿ ಮೇಲು ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್‍ನಲ್ಲಿ ಎಡಕ್ಕೆ ತಿರುವು ಪಡೆದು ಟಿ. ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಬಿಡಿಎ ಮುಖ್ಯ ಕಚೇರಿ, ಪಿ.ಜಿ. ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್ ಬಳಿಕ, ಬಾಷ್ಯಂ ವೃತ್ತ, ಸ್ಯಾಂಕಿ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್, ಮಾರಮ್ಮ ವೃತ್ತ, ಬಿಎಚ್‍ಇಎಲ್ ಸರ್ವಿಸ್ ರಸ್ತೆ, ಬಿಎಚ್‍ಇಎಲ್ ವೃತ್ತ, ಯಶವಂತಪುರ ವೃತ್ತ, ಮೆಟ್ರೊ ಷಾಪ್, ಮಾರಪ್ಪನ ಪಾಳ್ಯ, ಗೋವರ್ಧನ ಥಿಯೇಟರ್ ಜಂಕ್ಷನ್, ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ, ಎಂಇಐ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ ಜಂಕ್ಷನ್, ಎಇಎಂಟಿಐ ಜಂಕ್ಷನ್, ಲಾರಿ ಅಸೋಸಿಯೇಷನ್ ಕಚೇರಿ, ಎಫ್‍ಟಿಐ ವೃತ್ತ ಮಾರ್ಗವಾಗಿ ಸಾಗಿ ಕಂಠೀರವ ಸ್ಟುಡಿಯೋ ತಲುಪಿತು.
ಪೊಲೀಸರ ನಿಯೋಜನೆ: