ಕರ್ನಾಟಕ

karnataka

ETV Bharat / city

ಆ್ಯಸಿಡ್ ನಾಗ ಯಾವುದೇ ಸಾಕ್ಷಿ ಬಿಡದೆ ಪರಾರಿಯಾಗಿದ್ದಾನೆ : ಕಮಿಷನರ್ ಕಮಲ್ ಪಂತ್

ಪ್ರೀತಿಗೆ ನಿರಾಕರಿಸಿದ್ದಕ್ಕೆ ಭಗ್ನಪ್ರೇಮಿಯೇ ಈ ಕೃತ್ಯ ಎಸಗಿದ್ದನು. ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ಕೆಲಸ ಮಾಡುಲು ತೆರಳುತ್ತಿದ್ದ ವೇಳೆ ಭಗ್ನ ಪ್ರೇಮಿ ನಾಗೇಶ್​ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಆಗಿನಿಂದಲೂ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ..

By

Published : May 11, 2022, 2:29 PM IST

Acid Naga escape without leave any evidence, Bengaluru acid case, Commissioner Kamal Pant statement, Bengaluru crime news, ಯಾವುದೇ ಸಾಕ್ಷ್ಯಾಧಾರ ಬಿಡದೇ ಆ್ಯಸಿಡ್​ ನಾಗ ಪರಾರಿ, ಬೆಂಗಳೂರು ಆ್ಯಸಿಡ್ ಪ್ರಕರಣ, ಕಮಿಷನರ್ ಕಮಲ್ ಪಂತ್ ಹೇಳಿಕೆ, ಬೆಂಗಳೂರು ಅಪರಾಧ ಸುದ್ದಿ,
ಕಮಿಷನರ್ ಕಮಲ್ ಪಂತ್ ಹೇಳಿಕೆ

ಬೆಂಗಳೂರು :ಕಳೆದ ತಿಂಗಳು ಯುವತಿ ಮೇಲೆ ಆ್ಯಸಿಡ್ ಎರಚಿ‌ ವಿಕೃತಿ ಮೆರೆದಿದ್ದ ಆರೋಪಿ‌ ನಾಗೇಶ್ ಯಾವುದೇ ಸುಳಿವು ಸಿಗದೆ ನಾಪತ್ತೆಯಾಗಿದ್ದಾನೆ.‌ ಆತನ ಪತ್ತೆಗಾಗಿ ನಮ್ಮ ತಂಡ ಅವಿರತ ಶ್ರಮಪಡುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತಿಳಿಸಿದ್ದಾರೆ.

ಯುವತಿ ಮೇಲಿನ ಆ್ಯಸಿಡ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನರ್ ಕಮಲ್ ಪಂತ್ ಹೇಳಿಕೆ ನೀಡಿರುವುದು..

ಆರೋಪಿ ಹಿಡಿಯಲು ತಂಡಗಳು ರಚನೆಯಾಗಿವೆ. ಆರೋಪಿ ಯಾವುದೇ ಸಾಕ್ಷಿ ಬಿಡದೆ ಪರಾರಿಯಾಗಿದ್ದಾನೆ. ನಮ್ಮ ಕಡೆಯಿಂದ ಈಗಾಗಲೇ ಬಹಳ ಪ್ರಯತ್ನ ನಡೆದಿದೆ. ಇತ್ತೀಚೆಗೆ ಈ ಕೇಸ್​​ಗೆ ಮಾಡಿದ ಪ್ರಯತ್ನ ಬೇರೆ ಯಾವುದೇ ಕೇಸ್​ಗೆ ಮಾಡಿಲ್ಲ ಎಂದರು.

ಓದಿ:ಬೆಂಗಳೂರು: ಕೆಲಸಕ್ಕೆಂದು ತೆರಳಿದ್ದ ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಆ್ಯಸಿಡ್ ದಾಳಿ...!

ಆತ ಈ ಹಿಂದೆಯೇ ಪ್ರೀಪ್ಲಾನ್ ಮಾಡಿ ಕೃತ್ಯ ಎಸಗಿ ಮನೆಯವರಿಗೆ ಮನೆ ಖಾಲಿ ಮಾಡಲು ತಿಳಿಸಿದ್ದ ಎಂದು ತಿಳಿದು ಬಂದಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೂ ವಿಶೇಷ ತಂಡಗಳನ್ನ ರವಾನೆ ಮಾಡಲಾಗಿದೆ. ಎಲ್ಲಾ ದೇವಸ್ಥಾನದಲ್ಲಿ ಸಹ ಹುಡುಕಾಟ ನಡೆಸುತ್ತಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ. ಏಪ್ರಿಲ್​ 28ರಂದು ಭಗ್ನ ಪ್ರೇಮಿಯೊಬ್ಬ 23 ವರ್ಷದ ಯವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ.

ಪ್ರೀತಿಗೆ ನಿರಾಕರಿಸಿದ್ದಕ್ಕೆ ಭಗ್ನಪ್ರೇಮಿಯೇ ಈ ಕೃತ್ಯ ಎಸಗಿದ್ದನು. ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ಕೆಲಸ ಮಾಡುಲು ತೆರಳುತ್ತಿದ್ದ ವೇಳೆ ಭಗ್ನ ಪ್ರೇಮಿ ನಾಗೇಶ್​ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಆಗಿನಿಂದಲೂ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ABOUT THE AUTHOR

...view details