ಬೆಂಗಳೂರು: ಉಕ್ರೇನ್ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಆಪರೇಷನ್ ಗಂಗಾ ಅಡಿಯಲ್ಲಿ ಕರೆತರಲಾಗುತ್ತಿದೆ. ಇಲ್ಲಿಯವರೆಗೂ 476 ವಿದ್ಯಾರ್ಥಿಗಳು ಮರಳಿದ್ದು, 163 ವಿದ್ಯಾರ್ಥಿಗಳು ಅಲ್ಲಿದ್ಧಾರೆ ಎಂದು ನೋಡಲ್ ಅಧಿಕಾರಿ ಡಾ. ಮನೋಜ್ ರಾಜನ್ ತಿಳಿಸಿದರು.
ಆಪರೇಷನ್ ಗಂಗಾ: ಕರ್ನಾಟಕದ 476 ವಿದ್ಯಾರ್ಥಿಗಳ ರಕ್ಷಣೆ
ಇಂದು ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಕರ್ನಾಟಕದ 65 ವಿದ್ಯಾರ್ಥಿಗಳು ಬಂದಿಳಿದರು. ಉಕ್ರೇನ್ನಲ್ಲಿರುವ 163 ವಿದ್ಯಾರ್ಥಿಗಳನ್ನು ಸರ್ಕಾರ ಶೀಘ್ರವಾಗಿ ಕರೆ ತರಲಿದೆ ಎಂದು ನೋಡಲ್ ಅಧಿಕಾರಿ ತಿಳಿಸಿದರು.
ನೋಡಲ್ ಅಧಿಕಾರಿ ಡಾ. ಮನೋಜ್ ರಾಜನ್
ಇಂದು ಬೆಳಿಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 65 ವಿದ್ಯಾರ್ಥಿಗಳು ಆಗಮಿಸಿದರು, ಇಲ್ಲಿಯವರೆಗೂ 51 ವಿಮಾನಗಳಲ್ಲಿ 476 ವಿದ್ಯಾರ್ಥಿಗಳನ್ನು ಕರೆತಲಾಗಿದೆ. 163 ವಿದ್ಯಾರ್ಥಿಗಳು ರೊಮೇನಿಯಾ ಮತ್ತು ಪೋಲೆಂಡ್ ದೇಶಗಳ ಗಡಿಯಲ್ಲಿದ್ದು ಶೀಘ್ರವೇ ಕರೆತರಲು ಸರ್ಕಾರ ವ್ಯವಸ್ಥೆ ಮಾಡಿದೆ ಎಂದರು.ಯ
ಇದನ್ನೂ ಓದಿ:ರಷ್ಯಾ ಯುದ್ಧ ಟ್ಯಾಂಕ್ ವಶಕ್ಕೆ ಪಡೆದು ಸ್ವದೇಶದ ಬಾವುಟ ಹಾರಿಸಿದ ಉಕ್ರೇನ್ ಪ್ರಜೆ: ವಿಡಿಯೋ
TAGGED:
ukriane russia conflict