ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 54 ಮಂದಿ ಕೊರೊನಾಗೆ ಬಲಿ.. ಅಂತರ್ ಜಿಲ್ಲೆ ಓಡಾಟದಿಂದ ಸೋಂಕು ಹೆಚ್ಚಾಯ್ತಾ? - karnataka corona update

ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 54 ಮಂದಿ ಬಲಿಯಾಗಿದ್ದು, ಹೊಸದಾಗಿ 2,062 ಸೋಂಕಿತರ ಪತ್ತೆಯಾಗಿದ್ದಾರೆ. ಕೊರೊನಾ ಭಯಕ್ಕೆ ಊರು ಬಿಟ್ಟು‌ ಊರು ಹೋಗುತ್ತಿರುವುದು ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಲು ಮುಖ್ಯ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

54 people die of coronavirus in state
ರಾಜ್ಯದಲ್ಲಿಂದು 54 ಮಂದಿ ಕೊರೊನಾಗೆ ಬಲಿ..ಸೋಂಕು ಹೆಚ್ಚಾಗಲು ಅಂತರ ಜಿಲ್ಲೆ ಓಡಾಟವೇ ಕಾರಣವಾಯಿತಾ?

By

Published : Jul 8, 2020, 11:39 PM IST

ಬೆಂಗಳೂರು:ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 54 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 470ಕ್ಕೆ ಏರಿದೆ. ಸಾವಿನ ಸಂಖ್ಯೆಯೊಂದಿಗೆ ಸೋಂಕಿತರ ಸಂಖ್ಯೆ 2,062ಕ್ಕೆ ಏರಿದ್ದು, ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,877ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 452 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 778 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 28,877 ಸೋಂಕಿತರ ಪೈಕಿ, 11,876 ಗುಣಮುಖರಾಗಿದ್ದಾರೆ.

ಇನ್ನು, ಕೊರೊನಾ ಭಯಕ್ಕೆ ಊರು ಬಿಟ್ಟು‌ ಊರು ಹೋಗುತ್ತಿರುವುದು ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಲು ಮುಖ್ಯ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ಅಂತರ್ ಜಿಲ್ಲೆಯಲ್ಲಿ ಜನರ ಓಡಾಟ ಹೆಚ್ಚಾಗಿದ್ದು, ಟೋಲ್​ಗಳಲ್ಲಿ ಜನಸಂದಣಿ ಜಾಸ್ತಿ ಇರಲಿದೆ. ಜನಸಂದಣಿ ಹೆಚ್ಚಿರುವ ಕಡೆಗಳಲ್ಲಿ ಸೋಂಕು ಹರಡಲು ದಾರಿ ಮಾಡಿಕೊಡುತ್ತದೆ. ಜನರು ಬುದ್ದಿವಂತಿಕೆಯಿಂದ ನಡೆದುಕೊಳ್ಳಬೇಕು. ಕೊರೊನಾಗೆ ಭಯ ಪಡದೇ, ಊರು ಬಿಟ್ಟು ಹೋಗದೆ, ಇರುವಲ್ಲೇ ಹೋರಾಡಬೇಕು ಅಂತ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಮಂಜುನಾಥ್ ತಿಳಿಸಿದ್ದಾರೆ.‌

ಕೊರೊನಾಗೆ ವ್ಯಾಕ್ಸಿನ್ ಬರಲು 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯವೂ ಆಗಬಹುದು. ಹೀಗಾಗಿ ಅಂತರ ಕಾಯ್ದುಕೊಳ್ಳುವುದು, ಸರಿಯಾದ ಕ್ರಮದಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಬೇಕು. ಈಗ ಮಳೆಗಾಲ ಶುರುವಾಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಕಾಲವಿದು. ‌ಈ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಕೆಮ್ಮು ಜ್ವರ ಗಂಟಲು ನೋವು ಬರಬಹುದು‌‌. ಮುಖ್ಯವಾಗಿ ಮೈಕೈ ನೋವು, ತಲೆನೋವು, ಆಯಾಸ, ಆಲಸ್ಯ, ಲೂಸ್​ಮೋಷನ್ ಆದರೆ ಕೂಡಲೇ ತಪಾಸಣೆ ಮಾಡಿಸಿಕೊಳ್ಳಿ. ಈ ಸಮಯದಲ್ಲಿ ಸ್ವಯಂಪ್ರೇರಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಸಲಹೆ ನೀಡಿದ್ದಾರೆ. ಪ್ರಸ್ತುತ ಒಂದು ದಿನಕ್ಕೆ ರಾಜ್ಯದಲ್ಲಿ 18,000 ಟೆಸ್ಟ್​ಗಳನ್ನ ಮಾಡಲಾಗುತ್ತಿದೆ ಮತ್ತು ಕೆಲವೇ ದಿನಗಳಲ್ಲಿ ದಿನಕ್ಕೆ 30,000 ಜನರಿಗೆ ಟೆಸ್ಟ್ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಎಲ್ಲಾ ಆಸ್ಪತ್ರೆಗಳು ಆ್ಯಂಟಿಜೆನ್ ಟೆಸ್ಟ್ ಬಳಸಿ:ಆ್ಯಂಟಿಜೆನ್ ಟೆಸ್ಟ್ ಆರಂಭಿಸಲು ಯೋಜಿಸಲಾಗಿದ್ದು, ಇದರಿಂದ ಕೆಲವೇ ನಿಮಿಷಗಳಲ್ಲಿ ಕೋವಿಡ್ ಪ್ರಾಥಮಿಕ ತಪಾಸಣೆ ಮಾಡಬಹುದಾಗಿದೆ. ಇದರಲ್ಲಿ ಪಾಸಿಟಿವ್ ಕಂಡು ಬಂದಲ್ಲಿ ಅಂತಹವರನ್ನ ಹೆಚ್ಚಿನ ತಪಾಸಣೆಗಾಗಿ ಕಳುಹಿಸಬಹುದಾಗಿದೆ. ಪ್ರತಿ ಆಸ್ಪತ್ರೆಗಳು ಈ ಆ್ಯಂಟಿಜನ್ ಉತ್ಪನ್ನವನ್ನು ಬಳಸಬೇಕು. ಇದರ ವೆಚ್ಚ 450 ರೂಪಾಯಿ ಇರಬಹುದು. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಅವರ ಕೋವಿಡ್ ವರದಿ ಬರುವುದನ್ನ ಕಾಯುವಿಕೆ ತಪ್ಪಲಿದೆ ಎಂದರು.

ಇತ್ತೀಚೆಗೆ ಕೋವಿಡ್​ಗಿಂತ ಕೋವಿಡೇತರ ಸಾವು ಹೆಚ್ಚಾಗ್ತಿದೆ.‌ ಕೋವಿಡ್ ಭಯದಿಂದ ಜನರು ಮುಕ್ತರಾಗಬೇಕು. ಇದೊಂದು ಸಂಪರ್ಕದಿಂದ ಬರುವ ವೈರಾಣುವಾಗಿದ್ದು, ಭಯದಿಂದ ಜನರು ತಲ್ಲಣಗೊಂಡಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗುವುದಕ್ಕಿಂತ ಹೆಚ್ಚಿನ ಔಷಧಿ ಇಲ್ಲ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಶೇಕಡ 80-90 ಕೋವಿಡ್ ರೋಗಿಗಳಿಗೆ ಯಾವುದೇ ಗಂಭೀರ ತೊಂದರೆಯಾಗುವುದಿಲ್ಲ. ಕೆಲವು ಜನರು ತಮ್ಮ ಅನಾರೋಗ್ಯದ ಇತರೆ ಕಾರಣಗಳಿಗಾಗಿ ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಾರೆ ಎಂದಿದ್ದಾರೆ.

ABOUT THE AUTHOR

...view details