ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ದಿನೇ ದಿನೆ ಡೆಂಘೀ ಸೋಂಕು ಹೆಚ್ಚಾಗುತ್ತಿದ್ದು, ಉದ್ಯಾನ ನಗರಿಯಲ್ಲಿ ಅದ್ಯಾಕೋ ಡೆಂಘೀ ಪ್ರಕರಣಗಳು ಕಡಿಮೆ ಆಗುವ ಲಕ್ಷಣವೇ ಕಾಣುತ್ತಿಲ್ಲ.
ಮಹಾನಗರಿಯಲ್ಲಿ ಜಸ್ಟ್ 8 ತಿಂಗಳಲ್ಲಿ 5,352 ಡೆಂಘೀ ಪ್ರಕರಣಗಳು ಪತ್ತೆ!
ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿ ದಿನೇ ದಿನೆ ಡೆಂಘೀ ಸೋಂಕು ಹೆಚ್ಚಾಗುತ್ತಿದ್ದು, ಉದ್ಯಾನ ನಗರಿಯಲ್ಲಿ ಅದ್ಯಾಕೋ ಡೆಂಘೀ ಪ್ರಕರಣಗಳು ಕಡಿಮೆ ಆಗುವ ಲಕ್ಷಣವೇ ಕಾಣುತ್ತಿಲ್ಲ. ಜನವರಿಯಿಂದ-ಆಗಸ್ಟ್ ತಿಂಗಳ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 5,352 ಡೆಂಘೀ ಪ್ರಕರಣಗಳು ಪತ್ತೆ ಆಗಿದೆ ಎಂದು ತಿಳಿದು ಬಂದಿದೆ.
ಸೊಳ್ಳೆ
ಹೌದು, ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಾಗುತ್ತಿದ್ದು, ಜನವರಿಯಿಂದ-ಆಗಸ್ಟ್ ತಿಂಗಳ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 5,352 ಡೆಂಘೀ ಪ್ರಕರಣಗಳು ಪತ್ತೆ ಆಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಡೆಂಘೀ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹೂವಿನ ಕುಂಡ, ಬೀಸಾಕಿದ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ.