ಕರ್ನಾಟಕ

karnataka

ETV Bharat / city

ಕೋಡಿಂಗ್​​ನಲ್ಲಿ ವಿಶ್ವ ದಾಖಲೆ ಬರೆದ 'ಬೆಂಗಳೂರಿನ' 5 ವರ್ಷದ ಬಾಲಕಿ - ಸುನ್ವಿಶಾ. ಸಿ ನಾಯರ್

ಬೈನರಿ ಪದ್ಧತಿಯು 0 ಮತ್ತು 1 ಅಲ್ಲಿ ಕೋಡಿಂಗ್, ಆಕ್ಟಲ್ ಪದ್ಧತಿಯು 8 ಸಂಖ್ಯೆಗಳನ್ನು ಹೊಂದಿರುತ್ತದೆ. (0-7) ಹಾಗೂ ಹೆಕ್ಸಾಡೆಸಿಮಲ್ ಪದ್ಧತಿಯು 16 ಸಂಖ್ಯೆಗಳನ್ನು 0-9 ಮತ್ತು ಅವುಗಳಿಗೆ ಪೂರಕವಾಗಿ A,C,B,D,E,F ಗಳನ್ನು ಬಳಸುತ್ತದೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Dec 17, 2021, 9:38 AM IST

ಬೆಂಗಳೂರು :ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ಬೆಂಗಳೂರಿನ ಎಸ್.ಜಿ ಪಾಳ್ಯದಲ್ಲಿರುವ ಕ್ರೈಸ್ಟ್ ಕೆಜಿ ಶಾಲೆಯಲ್ಲಿ(Christ KG School) ವ್ಯಾಸಂಗ ಮಾಡುತ್ತಿರುವ 5 ವರ್ಷದ ಸುನ್ವಿಶಾ. ಸಿ ನಾಯರ್ ಕೋಡಿಂಗ್‌ನಲ್ಲಿ ವಿಶ್ವ ದಾಖಲೆ ಬರೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಸುನ್ವಿಶಾ.ಸಿ ನಾಯರ್ ಕೋಡಿಂಗ್‌ನಲ್ಲಿ '1 ರಿಂದ 15'ರವರೆಗಿನ ಡೆಸಿಮಲ್ ಹಾಗೂ ಅದಕ್ಕೆ ಪೂರಕವಾದ ಆಕ್ಟಲ್ (Octal), ಹೆಕ್ಸಾಡೆಸಿಮಲ್ (hexadecimal) ಹಾಗೂ ಬೈನರಿ (Binary numbers) ಸಂಖ್ಯೆಗಳ ಕೋಡಿಂಗ್ ಮಾಡಿದ ಜಗತ್ತಿನ 'ಅತಿ ಕಿರಿಯ' ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಬೈನರಿ ಪದ್ಧತಿಯು 0 ಮತ್ತು 1 ಅಲ್ಲಿ ಕೋಡಿಂಗ್, ಆಕ್ಟಲ್ ಪದ್ಧತಿಯು 8 ಸಂಖ್ಯೆಗಳನ್ನು ಹೊಂದಿರುತ್ತದೆ. (0-7) ಹಾಗೂ ಹೆಕ್ಸಾಡೆಸಿಮಲ್ ಪದ್ಧತಿಯು 16 ಸಂಖ್ಯೆಗಳನ್ನು 0-9 ಮತ್ತು ಅವುಗಳಿಗೆ ಪೂರಕವಾಗಿ A,C,B,D,E,F ಗಳನ್ನು ಬಳಸುತ್ತದೆ.

ದೆಹಲಿ ಮೂಲದ ಇಂಟರ್‌ನ್ಯಾಷನಲ್‌ ಬುಕ್ ಆಫ್ ರೆಕಾರ್ಡ್ಸ್ ಎಂಬ ಸಂಸ್ಥೆ ಸುನ್ವಿಶಾಳ ಈ ದಾಖಲೆಯನ್ನು ಗುರುತಿಸಿ ಮಾನ್ಯತೆ ನೀಡಿದೆ. ಇದಲ್ಲದೇ, ಕಲಾಂ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ "ರೇಖಾ ನಕ್ಷೆಯ ಮೇಲೆ ಅತಿ ವೇಗವಾಗಿ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಅವುಗಳ ರಾಜಧಾನಿಗಳನ್ನು ಗುರುತಿಸುವ ಹಾಗೂ ಉಚ್ಛರಿಸುವ" ಬಾಲಕಿ ಎಂದು ಗುರುತಿಸಿಗೊಂಡಿದ್ದಳು. ಸುನ್ವಿಶಾ ಸಿ ನಾಯರ್, ಸಾಧನೆ ಕುರಿತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಖಿಲ ಭಾರತ ರೈಲ್ವೆ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ : ನೈರುತ್ಯ ರೈಲ್ವೆಗೆ ದ್ವಿತೀಯ ಸ್ಥಾನ

ABOUT THE AUTHOR

...view details