ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ತೌಕ್ತೆ ಚಂಡಮಾರುತದ ರೌದ್ರಾವತಾರ ಜೋರಾಗಿದ್ದು, ಈವರೆಗೆ 4 ಮಂದಿ ಸಾವನ್ನಪಿದ್ದಾರೆ.
ಸಂಜೆ ಐದು ಗಂಟೆವರೆಗಿನ ಪ್ರಾಥಮಿಕ ವರದಿ ಪ್ರಕಾರ, ರಾಜ್ಯದ ಏಳು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಿತ್ತು. ಒಟ್ಟು 20 ತಾಲೂಕುಗಳು ಹಾಗೂ 98 ಗ್ರಾಮಗಳು ಚಂಡಮಾರುತದ ಆರ್ಭಟಕ್ಕೊಳಗಾಗಿವೆ. ಚಂಡಮಾರುತದ ಅಬ್ಬರಕ್ಕೆ ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಶಿವಮೊಗ್ಗದಲ್ಲಿ ತಲಾ ಒಬ್ಬರಂತೆ 4 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 216 ಮನೆಗಳು ಚಂಡಮಾರುತಕ್ಕೆ ಹಾನಿಗೊಳಗಾಗಿವೆ.
ದಕ್ಷಿಣ ಕನ್ನಡದಲ್ಲಿ 69, ಉಡುಪಿ 36, ಉ.ಕನ್ನಡದಲ್ಲಿ 98, ಕೊಡಗು 5, ಚಿಕ್ಕಮಗಳೂರು 6 ಮತ್ತು ಹಾಸನದಲ್ಲಿ 2 ಮನೆಗಳು ಹಾನಿಯಾಗಿವೆ. ಒಟ್ಟು 516 ಮಂದಿಯನ್ನು ರಕ್ಷಿಸಲಾಗಿದೆ.
ದ.ಕನ್ನಡ 380, ಉಡುಪಿ 60, ಉತ್ತರ ಕನ್ನಡ 76 ಜನರನ್ನು ರಕ್ಷಿಸಲಾಗಿದೆ. ಒಟ್ಟು 10 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 253 ಮಂದಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 491 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದರೆ, 27 ಟ್ರಾನ್ಸ್ಫಾರ್ಮರ್ ಜಖಂ ಆಗಿವೆ. ಪ್ರಾಣಿ ಹಾನಿ ಮತ್ತು ಬೆಳೆ ಹಾನಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಸಮುದ್ರದಲ್ಲಿ ಸಿಲುಕಿರುವವರ ರಕ್ಷಣೆಗೆ ಕ್ರಮಕೈಗೊಳ್ಳಿ, ಕಾಪ್ಟರ್ ವ್ಯವಸ್ಥೆ ಮಾಡಿ : ಸಿಎಂ ಸೂಚನೆ