ಬೆಂಗಳೂರು: ನಗರವನ್ನು ಸ್ವಚ್ಛಗೊಳಿಸಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಬಿಬಿಎಂಪಿಯ 94 ಪೌರಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 23 ಮಂದಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದರು.
ಬೆಂಗಳೂರಲ್ಲಿ 23 ಪೌರಕಾರ್ಮಿಕರಿಗೆ ವಕ್ಕರಿಸಿದ ಕೊರೊನಾ! - coronavirus update
ಬೆಂಗಳೂರು ನಗರದ 23 ಪೌರಕಾರ್ಮಿಕರಿಗೆ ಕೊರೊನಾ ವೈರಸ್ ತಗುಲಿದ್ದು, ಅವರ ಕುಟುಂಬ ಸದಸ್ಯರಿಗೆ ರ್ಯಾಂಡಮ್ ಪರೀಕ್ಷೆ ನಡೆಸಲಾಗುತ್ತಿದೆ.
ಕೋವಿಡ್-19 ಸೋಂಕು
ಪಾದರಾಯನಪುರ ಹಾಗೂ ಗೋರಿಪಾಳ್ಯ, ದೀಪಾಂಜಲಿನಗರ (ವಾರ್ಡ್ ನಂ.158) ಹಾಗೂ ಸುಂಕೇನಹಳ್ಳಿ (ವಾರ್ಡ್ ನಂ.142) ಪೌರಕಾರ್ಮಿಕರಿಗೆ ಕೊರೊನಾ ವೈರಸ್ ತಗುಲಿದೆ. ಅವರ ಕುಟುಂಬ ಸದಸ್ಯರನ್ನೂ ರ್ಯಾಂಡಮ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದೀಪಾಂಜಲಿನಗರದ ಪೌರಕಾರ್ಮಿಕರೊಬ್ಬರು ಹದಿನೈದು ದಿನಗಳ ಹಿಂದೆ ಕೊರೊನಾಗೆ ಬಲಿಯಾಗಿದ್ದರು.