ಕರ್ನಾಟಕ

karnataka

ETV Bharat / city

ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 21 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ - ಐಪಿಎಸ್ ಅಧಿಕಾರಿಗಳಿಗೆ ಪದಕ

ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 21 ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿ ಪದಕಕ್ಕೆ ಆಯ್ಕೆ ಆಗಿದ್ದಾರೆ.

award
award

By

Published : Aug 14, 2021, 2:19 PM IST

ಬೆಂಗಳೂರು: ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 21 ಪೊಲೀಸರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ. ಈ ಕುರಿತು ಅಧಿಕೃತವಾಗಿ ಕೇಂದ್ರ ಗೃಹ ಇಲಾಖೆ ಪ್ರಕಟಣೆ ಹೊರಡಿಸಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.

ಎಡಿಜಿಪಿ ಉಮೇಶ್ ಕುಮಾರ್, ಎಡಿಜಿಪಿ ಅರುಣ್ ಚಕ್ರವರ್ತಿ ಸೇರಿ 21 ಪೊಲೀಸರಿಗೆ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಗೆ ಪದಕ ನೀಡಲಾಗುತ್ತಿದೆ. ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿರುವುದು ಹೆಮ್ಮೆಯ ವಿಷಯ. ಬೆಂಗಳೂರು ನಗರದ ಸಿ.ಐ.ಡಿ ಎಡಿಜಿಪಿ ಉಮೇಶ್ ಕುಮಾರ್, ಬೆಂಗಳೂರು ನಗರದ ಐ.ಎಸ್.ಡಿ ಎಡಿಜಿಪಿ ಅರುಣ್ ಚಕ್ರವರ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 21 ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿ ಪದಕ
ಅದೇ ರೀತಿ 19 ಪೊಲೀಸ್ ಆಧಿಕಾರಿಗಳಿಗೆ ಅತ್ಯುನ್ನತ ಸೇವಾ ಪದಕ ಸಿಕ್ಕಿದೆ. ಪ್ರಮುಖವಾಗಿ ಕೆ.ಎಸ್.ಆರ್.ಪಿ 3ನೇ ಬೆಟಾಲಿಯನ್ ಕಮಾಂಡೆಂಟ್ ಎಂ.ವಿ. ರಾಮಕೃಷ್ಣ ಪ್ರಸಾದ್, ಮಲ್ಲೇಶ್ವರಂ ಉಪವಿಭಾಗ ಎಸಿಪಿ ವೆಂಕಟೇಶ್ ನಾಯ್ಡು, ಚಿಕ್ಕಪೇಟೆ ಉಪವಿಭಾಗದ ಎಸಿಪಿ ಪಿ ರವಿ, ರಾಜ್ಯ ಗುಪ್ತಚರ ಇಲಾಖೆಯ ಡಿವೈಎಸ್​ಪಿ ನವೀನ್ ಕುಲಕರ್ಣಿ, ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದರಾಜು, ಬೆಂಗಳೂರು ನಗರದ ಎಸಿಬಿ ಇನ್ಸ್‌ಪೆಕ್ಟರ್ ಎಂ.ಜೆ ದಯಾನಂದ ಸೇರಿ ಒಟ್ಟು 19 ಪೊಲೀಸ್ ಅಧಿಕಾರಿಗಳಿಗೆ ಅತ್ಯುನ್ನತ ಸೇವಾ ಪದಕ ಸಂದಿವೆ.

ABOUT THE AUTHOR

...view details