ನವದೆಹಲಿ/ಬೆಂಗಳೂರು: ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
ಬೆಂಗಳೂರು ಸಬ್ ಅರ್ಬನ್ ರೈಲುಗಳ ಆರಂಭಕ್ಕಾಗಿ ಈ ಬಜೆಟ್ನಲ್ಲಿ ಕೇಂದ್ರ ಸರ್ಕಾರವು 3720 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯು ಒಟ್ಟು 18,600 ಕೋಟಿ ರೂ.ಗಳ ಯೋಜನೆಯಾಗಿದ್ದು, ಇದಕ್ಕೆ ಕೇಂದ್ರದಿಂದ 20% ಅನುದಾನ ನೀಡುವ ಭರವಸೆಯನ್ನು ನಿರ್ಮಲಾ ಸೀತಾರಾಮನ್ ನೀಡಿದ್ದಾರೆ. ಜೊತೆಗೆ ಈ ಯೋಜನೆಗೆ ಒಟ್ಟು ಯೋಜನೆಯ ಮೊತ್ತದ 60 ಪ್ರತಿಷತದವರೆಗಿನ ಬಾಹ್ಯ ನೆರವನ್ನು ಕೇಂದ್ರ ಸರ್ಕಾರ ನೀಡುತ್ತದೆ ಎಂದು ಸಚಿವೆ ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರು ಉಪನಗರ ರೈಲು ಓಡಾಟಕ್ಕಾಗಿ ಹೆಚ್ಚಿನ ಅನುದಾನ ಸಿಕ್ಕಂತಾಗಿದೆ. ಅಲ್ಲದೆ ಅನೇಕ ವರ್ಷಗಳ ಬೆಂಗಳೂರಿಗರ ಕನಸು ನನಸಾಗುವ ದಿನ ಸಮೀಪಿಸಿದೆ.