ಕರ್ನಾಟಕ

karnataka

ETV Bharat / city

ವಿದೇಶದಿಂದ ಬಂದ 10 ಜನರಿಗೆ ಕೋವಿಡ್​ ಸೋಂಕು ದೃಢ - ವಿದೇಶಿ ಪ್ರವಾಸಿಗರಿಗೆ ಕೋವಿಡ್​ ಸೋಂಕು

ವಿದೇಶದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ 10 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ತಗುಲಿರುವುದು ದೃಢವಾಗಿದೆ. ಸದ್ಯ ಸೋಂಕಿತರಿಗೆ ಬೌರಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..

10-foreign-travelers-tested-corona-positive
ಕೋವಿಡ್​ ಸೊಂಕು ಪ್ರಕರಣಗಳು

By

Published : Dec 25, 2021, 11:31 AM IST

ದೇವನಹಳ್ಳಿ :ವಿದೇಶದಿಂದ ಬಂದ 10 ಜನರಿಗೆ ಕೋವಿಡ್​ ಸೋಂಕು ತಗುಲಿರುವುದು ದೃಢವಾಗಿದೆ. ಸೋಂಕಿತರನ್ನು ನಗರದ ಬೌರಿಂಗ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಫ್ರಾಂಕ್‌ಫರ್ಟ್‌ನಿಂದ ಆಗಮಿಸಿದ 40 ವರ್ಷದ ಪುರುಷ, 30 ವರ್ಷದ ಮಹಿಳೆ, 33 ವರ್ಷದ ಪುರುಷ, 31 ವರ್ಷದ ಪುರುಷ ಮತ್ತು 29 ವರ್ಷದ ಪುರುಷ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿದೆ.

ವಿದೇಶಿ ಪ್ರವಾಸಿಗರಿಗೆ ಕೋವಿಡ್​ ಸೋಂಕು ದೃಢ : ಪ್ಯಾರಿಸ್‌ನಿಂದ ಆಗಮಿಸಿದ 33 ವರ್ಷದ ಪುರುಷ, 25 ವರ್ಷದ ಮಹಿಳೆ ಮತ್ತು 19 ವರ್ಷದ ಯುವಕನಲ್ಲಿ ಮತ್ತು ಕತಾರ್‌ನಿಂದ ಆಗಮಿಸಿದ 35 ವರ್ಷದ ಮಹಿಳಾ ಮತ್ತು 10 ವರ್ಷದ ಬಾಲಕಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಎಲ್ಲಾ10 ಕೋವಿಡ್ ಸೋಂಕಿತ ಪ್ರಯಾಣಿಕರನ್ನು ಬೆಂಗಳೂರು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details