ಬಳ್ಳಾರಿ:ವಿಜಯನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆನಂದ್ಸಿಂಗ್ ಅವರು ಆಯೋಗ್ಯ (ಅನರ್ಹ) ಶಾಸಕರಾಗಿದ್ದು, ಇಂತವರಿಗೆ ಮತದಾರ ಪ್ರಭು ಬೆಂಬಲಿಸಬಾರದೆಂದು ಗಣಿ ಉದ್ಯಮಿ ಟಪಾಲ್ ಗಣೇಶ ಮನವಿ ಮಾಡಿದ್ದಾರೆ.
ಆನಂದ್ಸಿಂಗ್ ಅನರ್ಹ ಅಲ್ಲ, ಅಯೋಗ್ಯ ಶಾಸಕ ಅಂತಿದ್ದಾರೆ ಟಪಾಲ್... ಏನಿದು 'ಗಣೇಶ'ನ ಗಲಾಟೆ? - vijyanagar by election
ವಿಜಯನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆನಂದ್ಸಿಂಗ್ ಅವರು ಆಯೋಗ್ಯ (ಅನರ್ಹ) ಶಾಸಕರಾಗಿದ್ದು,ಇಂತವರಿಗೆ ಮತದಾರ ಪ್ರಭು ಬೆಂಬಲಿಸಬಾರದೆಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಮನವಿ ಮಾಡಿದ್ದಾರೆ.
ಈ ಕುರಿತು ಎರಡು ನಿಮಿಷದ ವಿಡಿಯೋ ತುಣುಕೊಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಅವರು, ಆನಂದಸಿಂಗ್ ಅವರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಆಂಗ್ಲ ಭಾಷೆಯ ಡಿಸ್ಕ್ವಾಲಿಪೈಡ್ ಪದವನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿದ್ರೆ, ಅನರ್ಹ ಹಾಗೂ ಅಯೋಗ್ಯ ಎಂಬ ಅರ್ಥ ಬರುತ್ತೆ. ಹೀಗಾಗಿ,ಆನಂದಸಿಂಗ್ ಅಯೋಗ್ಯ. ವಿಜಯನಗರ ಕ್ಷೇತ್ರದ ಮತದಾರ ಬಂಧುಗಳು ಅಯೋಗ್ಯ ಶಾಸಕನಿಗೆ ಮಣೆ ಹಾಕಬಾರದೆಂದಿದ್ದಾರೆ.
ಆನಂದ್ಸಿಂಗ್ ಅವರು ,ಗಣಿ ಅಕ್ರಮದ ರೂವಾರಿಯಾಗಿದ್ದ ಮಾಜಿ ಸಚಿವ ಗಾಲಿ ಜರ್ನಾದನ ರೆಡ್ಡಿ ಅವರೊಂದಿಗೆ ಕೈಜೋಡಿಸಿದ್ದರು. ಕ್ರಿಮಿನಲ್ ಹಿನ್ನೆಲೆಯನ್ನೂ ಕೂಡ ಅವರು ಹೊಂದಿದ್ದಾರೆ. ಅಂಥವರ ಬೆಂಬಲಕ್ಕೆ ವಿಜಯನಗರ ಕ್ಷೇತ್ರದ ಮತದಾರರು ನಿಲ್ಲಬಾರದು. ಪ್ರಾಮಾಣಿಕ ಹಾಗೂ ರಾಜಮನೆತನದ ವೆಂಕಟರಾವ್ ಘೋರ್ಪಡೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ವಿಜಯನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅವರು ಶ್ರಮಿಸಲಿದ್ದಾರೆ. ಅಂಥವರ ಬೆಂಬಲಕ್ಕೆ ವಿಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ನಿಲ್ಲಬೇಕೆಂದು ಟಪಾಲ್ ಗಣೇಶ ಕೋರಿದ್ದಾರೆ.