ಬಳ್ಳಾರಿ: ರಕ್ಷಾ ಬಂಧನ ಹಬ್ಬದ ನಿಮಿತ್ತ ನಗರದ ಹವಂಬಾವಿ ಪ್ರದೇಶದಲ್ಲಿಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರಿಗೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ ಕೃಷ್ಣ ಮೋಹನ್ ರಾಖಿ ಕಟ್ಟುವ ಮುಖೇನ ವಿಶೇಷ ಗಮನ ಸೆಳೆದರು.
ಶ್ರೀರಾಮುಲು ಕೈಗೆ ರಾಖಿ ಕಟ್ಟಿದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ - MLA Shriramulu
ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯ ಬಲಪಡಿಸುವ ರಕ್ಷಾ ಬಂಧನ ಹಬ್ಬವನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ.
Raksha Bandhan Festival celebration MLA Shriramulu
ಶಾಸಕ ಬಿ.ಶ್ರೀರಾಮುಲು ನಿವಾಸಕ್ಕೆ ತೆರಳಿದ ಶಶಿಕಲಾ ದಂಪತಿ ಶಿವಪೂಜೆ ನೆರವೇರಿಸಿ ಮಂಗಳಾರತಿ ಹಿಡಿದು ಶ್ರೀರಾಮುಲು ಅವರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು. ರಾಖಿ ಕಟ್ಟಿಸಿಕೊಂಡ ರಾಮುಲು ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿದರು.