ಕರ್ನಾಟಕ

karnataka

ETV Bharat / city

ತಾಳಿಕೋಟಿ ಪೊಲೀಸರ ಕಾರ್ಯಾಚರಣೆ: ಮೂವರು ಕಳ್ಳರ ಬಂಧನ

ತಾಳಿಕೋಟಿ ಪೊಲೀಸರು ಕಾರ್ಯಾಚರಣೆ ನಡೆಸಿ ಹಾಡಹಗಲೇ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 4.14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಕಳ್ಳರಿಂದ 4.14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಕಳ್ಳರಿಂದ 4.14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

By

Published : Nov 8, 2020, 4:48 PM IST

Updated : Nov 8, 2020, 5:35 PM IST

ಮುದ್ದೇಬಿಹಾಳ:ತಾಳಿಕೋಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ಕಡೆಗಳಲ್ಲಿ ಹಾಡಹಗಲೇ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಅವರಿಂದ 4.14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ತನಿಖಾ ತಂಡಕ್ಕೆ ನಗದು ಬಹುಮಾನ: ಪ್ರಕರಣದ ತನಿಖೆಗೆ ಎಸ್ಪಿ ಅನುಪಮ್ ಅಗರವಾಲ್, ಹೆಚ್ಚುವರಿ ಎಸ್ಪಿ ಡಾ.ರಾಮ ಅರಸಿದ್ಧಿ ಅವರ ಮಾರ್ಗದರ್ಶನದಲ್ಲಿ ಬ.ಬಾಗೇವಾಡಿ ಡಿವೈಎಸ್ಪಿ ಈ. ಶಾಂತವೀರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ಸಿಪಿಐ ಆನಂದ ವಾಘಮೋಡೆ, ತಾಳಿಕೋಟಿ ಪಿಎಸೈ ಎಸ್.ಎಚ್.ಪವಾರ,ಕ್ರೆಂ​​ ಎಸ್‌ಐ ಜಿ.ಜಿ. ಬಿರಾದಾರ, ಸಿಬ್ಬಂದಿ ಆರ್.ಎಸ್. ಭಂಗಿ, ಅಶೋಕ ನಾಯ್ಕೋಡಿ, ಗುರಪ್ಪ ನಾಯಕ, ಮಡಿವಾಳಪ್ಪ ಪಟ್ಟೇದ, ಗಿರಿಮಲ್ಲಪ್ಪ ಚಲವಾದಿ, ಶಿವಕುಮಾರ ಬಿರಾದಾರ, ಸಂಗಮೇಶ ಚಲವಾದಿ, ಶಿವಾನಂದ ಕಾರಜೋಳ, ಗುಂಡು ಗಿರಣಿವಡ್ಡರ, ಚಂದ್ರು ಹತ್ತರಕಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದ್ದು, ಎಸ್ಪಿ ಅವರು ತನಿಖಾ ತಂಡಕ್ಕೆ ಪ್ರಶಂಸಿಸಿ ನಗದು ಬಹಮಾನ ಘೋಷಿಸಿದ್ದಾರೆ.

ತಾಳಿಕೋಟಿ ಪೊಲೀಸರಿಂದ ಮೂವರು ಕಳ್ಳರ ಬಂಧನ

ಈ ಕುರಿತು ಮಾಹಿತಿ ನೀಡಿರುವ ಸಿಪಿಐ ಆನಂದ ವಾಘಮೋಡೆ ಅವರು, ತಾಳಿಕೋಟಿ ಪಟ್ಟಣದಲ್ಲಿ ಅ.24 ರಂದು ಅನಿಲಕುಮಾರ ಆಲಾಳಮಠ ಅವರ ಮನೆ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನ,ಬೆಳ್ಳಿ ಆಭರಣ ಸೇರಿ 36,000 ರೂ.ಗಳನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿತರಾದ ವಿಜಯಪುರ ಇಂದಿರಾನಗರದ ಅಬೂಬಕರ್ ರಜಾಕಸಾಬ ಝಂಡೆ, ವಿಜಯಪುರದ ಬಾಗಾಯಿ ಗಲ್ಲಿಯ ನಿವಾಸಿ ಮಹ್ಮದಯೂಸೂಫ ಅಯೂಬ್ ಕೋಟಿಹಾಳ, ವಿಜಯಪುರ ಝಂಡಾಕಟ್ಟಿಯ ಸಮೀರ ನಬಿಲಾಲ ಇನಾಮದಾರ ಅವರು ತಾಳಿಕೋಟಿ ನಗರದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಬಂಧಿಸಲಾಗಿತ್ತು.

ತಾಳಿಕೋಟಿ ಪೊಲೀಸರಿಂದ ಮೂವರು ಕಳ್ಳರ ಬಂಧನ

ಬಳಿಕ ವಿಚಾರಣೆಗೊಳಪಡಿಸಿದಾಗ ತಾಳಿಕೋಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಒಂದು ಮನೆ ಕಳೆದ ತಿಂಗಳ ಹಿಂದೆ ಒಂದು ಮನೆ ,15 ದಿನಗಳ ಹಿಂದೆ ಹಗಲು ವೇಳೆಯಲ್ಲಿ ಕೀಲಿ ಮುರಿದು ಮನೆಯಲ್ಲಿಟ್ಟಿದ್ದ ಬಂಗಾರ, ಬೆಳ್ಳಿ ಹಾಗೂ ಹಣವನ್ನು ಕಳುವು ಮಾಡಿರುತ್ತೇವೆ ಎಂದು ಬಾಯಿ ಬಿಟ್ಟಿದ್ದಾರೆ. ಅವರಿಂದ ಒಟ್ಟು 4.14 ಲಕ್ಷ ರೂ.ಮೌಲ್ಯದ ಕಳುವಾದ ಬೆಳ್ಳಿ, ಬಂಗಾರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Last Updated : Nov 8, 2020, 5:35 PM IST

ABOUT THE AUTHOR

...view details