ಬಳ್ಳಾರಿ: ಸಾರಿಗೆ ಬಸ್ ರಿಪೇರಿ ಮಾಡುವಾಗ ಬುಷ್ನ ರಾಡ್ ತುಂಡಾಗಿ ಮೆಕ್ಯಾನಿಕ್ನ ಗಂಟಲಿಗೆ ಸಿಲುಕಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಕುರುಗೋಡು ಡಿಪೋದಲ್ಲಿ ಘಟನೆ ನಡೆದಿದೆ. ತೆಕ್ಕಲಕೋಟಿ ನಿವಾಸಿ ಮಂಜುನಾಥ್ ಮೃತ ಕಾರ್ಮಿಕ.
KSRTC ಬಸ್ ರಿಪೇರಿ ವೇಳೆ ರಾಡ್ ಕಟ್: ಬಸ್ ಕೆಳಗಿದ್ದ ಮೆಕ್ಯಾನಿಕ್ ಸಾವು
ಬಸ್ ರಿಪೇರಿ ಮಾಡುವ ರಾಡ್ ಕಟ್ ಆಗಿ ಮೆಕ್ಯಾನಿಕ್ ಮೃತಪಟ್ಟ ಘಟನೆ ನಡೆದಿದೆ.
ಮೆಕ್ಯಾನಿಕ್ ಸಾವು
ತಾಂತ್ರಿಕ ಸಮಸ್ಯೆಯಿಂದಾಗಿ ಬಸ್ ಕುರುಗೋಡು ಡಿಪೋಗೆ ಬಂದಿತ್ತು. ಮೆಕ್ಯಾನಿಕ್ ಮಂಜುನಾಥ್ ಬಸ್ ಕೆಳಗಡೆಯ ಎಕ್ಸೆಲ್ ಸರಿಪಡಿಸುತ್ತಿದ್ದರು. ಆ ವೇಳೆ ಬುಷ್ ರಾಡ್ ತುಂಡಾಗಿ ಮಂಜುನಾಥ್ ಗಂಟಲಿಗೆ ಸಿಲುಕಿದೆ. ಕೂಡಲೇ ಇತರ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಮಂಜುನಾಥನನ್ನು ಹೊರ ತೆಗೆದಿದ್ದಾರೆ. ಆದರೆ ಆದಾಗಲೇ ಆತ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.
(ಇದನ್ನೂ ಓದಿ: ಬಾಗಲಕೋಟೆಯಲ್ಲಿ ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ)