ಕರ್ನಾಟಕ

karnataka

ETV Bharat / city

ಮಹಾಮಳೆಗೆ ಸಂಡೂರು ತಾಲೂಕಿನಲ್ಲಿ 36 ಮನೆಗಳು ಭಾಗಶಃ ಕುಸಿತ!

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 27 ಹಾಗೂ ತೋರಣಗಲ್ಲು ಹೋಬಳಿ ವ್ಯಾಪ್ತಿಯಲ್ಲಿ 8 ಮತ್ತು ಸಂಡೂರು ಹೋಬಳಿ ವ್ಯಾಪ್ತಿಯಲ್ಲಿ ಒಂದು ಕಚ್ಚಾ ಮನೆ ಭಾಗಶಃ ಕುಸಿದು ಬಿದ್ದಿವೆ.

Heavy rain in Ballary
ಜಲಾವೃತವಾಗಿರುವ ದೇವಸ್ಥಾನ

By

Published : Jul 25, 2020, 8:53 PM IST

ಬಳ್ಳಾರಿ: ಮೂರು ದಿನಗಳಿಂದ ಸುರಿದ ಧಾರಾಕಾರ ಮಹಾಮಳೆಗೆ ಗಣಿ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಹಳ್ಳಕೊಳ್ಳಗಳು, ಮೇಲ್ಸೆತುವೆ ಸೇರಿದಂತೆ ಹೊಲ-ಗದ್ದೆಗಳಿಗೆ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣ ಬೆಳೆನಷ್ಟ ಉಂಟಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಚ್ಚಾ ಮನೆಗಳಲ್ಲಿ ವಾಸಿಸುವವರ ನಿದ್ದೆಗೆಡಿಸಿದೆ.

ಜಲಾವೃತವಾಗಿರುವ ದೇವಸ್ಥಾನ

ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 27 ಹಾಗೂ ತೋರಣಗಲ್ಲು ಹೋಬಳಿ ವ್ಯಾಪ್ತಿಯಲ್ಲಿ 8 ಮತ್ತು ಸಂಡೂರು ಹೋಬಳಿ ವ್ಯಾಪ್ತಿಯಲ್ಲಿ ಒಂದು ಕಚ್ಚಾ ಮನೆಗಳು (ಮಣ್ಣಿನ ಮನೆಗಳು) ಭಾಗಶಃ ಕುಸಿದು ಬಿದ್ದಿದೆ. ಆ ಮನೆಗಳಲ್ಲಿ ವಾಸಿಸುವ ಕುಟುಂಬ ಸದಸ್ಯರು ಭಯಭೀತರಾಗಿದ್ದಾರೆ.

ಕೆಲವೆಡೆ ಪೂರ್ತಿ ಮನೆ, ಇನ್ನೂ ಕೆಲವೆಡೆ ಒಂದು ಭಾಗ ಅಥವಾ ಮೇಲ್ಛಾವಣಿ ಕುಸಿದಿದೆ. ಅದರಿಂದ ಮಳೆಯ ನೀರು ಮನೆಯೊಳಗೆ ನುಗ್ಗುತ್ತಿದೆ. ಹೀಗಾಗಿ, ರಾತ್ರಿಯಿಡೀ ನಿದ್ದೆಗೆಡುವ ಸನ್ನಿವೇಶ ನಿರ್ಮಾಣವಾಗಿದೆ.

ಮನೆ ಕುಸಿದಿರುವುದು

ಸಚಿವ ಆನಂದಸಿಂಗ್ ಭೇಟಿ:ಜಿಲ್ಲೆಯ ಹೊಸಪೇಟೆ ನಗರದಲ್ಲಿಂದು ಸುರಿದ ಭಾರೀ ಮಳೆಯಿಂದಾಗಿ ನಾನಾ ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿನ ಪಟೇಲಗರದ ಶ್ರೀಕೃಷ್ಣ ದೇಗುಲದಲ್ಲಿ ಒಳಗಡೆ ನೀರು ನುಗ್ಗಿದೆ. ಅರಣ್ಯ ಖಾತೆ ಸಚಿವ ಆನಂದ್​​​​​​ಸಿಂಗ್ ಅವರು ಹಾಗೂ ಅವರ ಅಳಿಯ ಧರ್ಮೇಂದ್ರ ಸಿಂಗ್ ಭೇಟಿ ನೀಡಿ ಪರಿಶೀಲಿಸಿದರು.

ಜೆ.ಪಿ. ನಗರದ ಬಳ್ಳಾರಿ ರಸ್ತೆಯಲ್ಲಿ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಬಸ್​​​ ಡಿಪೋ ಹಿಂಭಾಗದ ಬುಡ್ಗ ಜಂಗಮ ಕಾಲೊನಿಯ ಗುಡಿಸಲುಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ.

ಸೇತುವೆ ಮೇಲೆ ಹರಿಯುತ್ತಿರುವ ನೀರು

ರಾರಾವಿ ನದಿ ಸೇತುವೆ ಮೇಲೆ ನೀರು: ಜಿಲ್ಲೆಯ ಸಿರುಗುಪ್ಪ ತಾಲೂಕಿನಿಂದ ನೆರೆಯ ಆಂಧ್ರಪ್ರದೇಶದ ಅದೋನಿ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯ (ಕರ್ನೂಲು-ಕುಷ್ಟಗಿ‌) ರಾರಾವಿ ಬಳಿಯ (ವೇದಾವತಿ‌) ಹಗರಿ‌ ನದಿಯ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ABOUT THE AUTHOR

...view details