ಬಳ್ಳಾರಿ:ಮಲಗಿದ್ದ ವೇಳೆ ಹಾವು ಕಚ್ಚಿ ಬಾಲಕಿ ಮೃತಪಟ್ಟಿರುವ ಘಟನೆ ತಾಲೂಕಿನ ಸಿಡಿಗಿನಮೊಳ ಗ್ರಾಮದಲ್ಲಿ ನಡೆದಿದೆ. ಸಿಂಚನ (8) ಮೃತ ಬಾಲಕಿ. ರಾತ್ರಿ 12 ಗಂಟೆ ಸುಮಾರಿಗೆ ಬಾಲಕಿ ಹೊಟ್ಟೆ ನೋವೆಂದು ಅಳುವುದಕ್ಕೆ ಶುರು ಮಾಡಿದ್ದಾರೆ. ಕೂಡಲೇ ಪೋಷಕರು ಎಚ್ಚರವಾದಾಗ ಹಾವು ಕಂಡಿದೆ. ಹಾವನ್ನು ಹೊಡೆದು ಹಾಕಿ, ಮತ್ತೆ ಮಲಗಿದ್ದಾರೆ.
ಬಳ್ಳಾರಿ: ಮಲಗಿದ್ದ ಬಾಲಕಿಗೆ ಹಾವು ಕಚ್ಚಿ ಸಾವು - ಬಳ್ಳಾರಿಯಲ್ಲಿ ಹಾವು ಕಚ್ಚಿ ಬಾಲಕಿ ಸಾವು
ಹಾವು ಕಚ್ಚಿ ಬಾಲಕಿಯೊಬ್ಬಳು ಸಾವನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿಡಿಗಿನಮೊಳ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬಳಿಕ 3 ಗಂಟೆ ಸುಮಾರಿಗೆ ಬಾಲಕಿಗೆ ಫಿಟ್ಸ್ ಕಾಣಿಸಿಕೊಂಡಿದೆ. ಕೂಡಲೇ ಬಾಲಕಿಯನ್ನು ವಿಮ್ಸ್ಗೆ ದಾಖಲಿಸಿದಾಗ ವೈದ್ಯರು ಹಾವು ಕಚ್ಚಿದೆ ಎಂದು ತಿಳಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತ ಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬಾಲಕನ ಸಾಕ್ಷಿ ಪರಿಗಣಿಸಿದ ಕೋರ್ಟ್; ತಾಯಿಯ ಕೊಲೆಗೆ ಯತ್ನಿಸಿದ ತಂದೆಗೆ ಜೈಲು ಶಿಕ್ಷೆ