ಬಳ್ಳಾರಿ: ಜಿಂದಾಲ್ನಲ್ಲಿ ಕೊರೊನಾ ಸೋಂಕು ಪಸರಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ತಮ್ಮ ಸಿಬ್ಬಂದಿಗೆ ಎಸ್ಎಂಎಸ್ ಮತ್ತು ಟ್ವಿಟ್ಟರ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ಕುರಿತ ಅಪ್ಡೇಟ್ ನೀಡುವಂತೆ ಎಂದು ತಿಳಿಸಿದರು.
ಜಿಂದಾಲ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಸಭೆ ನಡೆಸಿದ ಡಿಸಿ ನಕುಲ್ ತಮ್ಮ ಕಚೇರಿಯಲ್ಲಿ ಜೂಮ್ ಮೂಲಕ ವಿಡಿಯೋ ಕಾನ್ಪರೆನ್ಸ್ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು. ತಮ್ಮಲ್ಲಿ 30 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಪ್ರತಿನಿತ್ಯ ಕೊರೊನಾ ಕುರಿತ ಮಾಹಿತಿ ಒದಗಿಸಬೇಕು. ಕಂಟ್ರೋಲ್ ರೂಂ ಸ್ಥಾಪಿಸಿ ಕೊರೊನಾ ಸಂಬಂಧಿತ ಸಂದೇಹ ಹಾಗೂ ಗೊಂದಲ ನಿವಾರಿಸಬೇಕು ಎಂದು ಅವರು ಸೂಚಿಸಿದರು. ಜ್ವರ, ಕೆಮ್ಮು, ಶೀತದಂತಹ ಲಕ್ಷಣ ಕಂಡುಬಂದಲ್ಲಿ ಹಾಗೂ ಉಸಿರಾಟದ ಸಮಸ್ಯೆ ಇರುವವರು ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಿ ವಿಮ್ಸ್ ಲ್ಯಾಬ್ಗೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅವರು ನಿರ್ದೇಶಿಸಿದರು.
ಜಿಂದಾಲ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಸಭೆ ನಡೆಸಿದ ಡಿಸಿ ನಕುಲ್ ಸೋಂಕಿತರೊಂದಿಗಿನ ಸಂಪರ್ಕಿತರಿಗೆ ಐಸೋಲೇಶನ್:
ಸಿಎಂಡಿ ಮತ್ತು ಕೋರೆಕ್ಸ್ ವಿಭಾಗಗಳಲ್ಲಿ ಕೊರೊನಾ ಸೊಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಅವರನ್ನು ಈಗಾಗಲೇ ಪ್ರತ್ಯೇಕಗೊಳಿಸಿ ಐಸೋಲೇಶನ್ನಲ್ಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಇವರೆಲ್ಲರೂ ಒಂದೇ ಆಫೀಸ್ ಜಾಗವನ್ನು ಹಂಚಿಕೊಳ್ಳುತ್ತಿದ್ದರು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಸಿಎಂಡಿಯಲ್ಲಿ ಶೇ.95ರಷ್ಟು ಜನರನ್ನು ಅಂದರೆ 87 ಜನರಲ್ಲಿ 83 ಜನರನ್ನು ಪ್ರತ್ಯೇಕಿಸಲಾಗಿದ್ದು, ಪ್ರಸ್ತುತ, ನಾಲ್ಕು ಜನರು ಮಾತ್ರಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಕೊರೆಕ್ಸ್ನಲ್ಲಿ 228 ಜನರಲ್ಲಿ 75 ಜನರನ್ನು ಐಸೋಲೇಶನ್ ಮಾಡಲಾಗಿದೆ.
ಜಿಂದಾಲ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಸಭೆ ನಡೆಸಿದ ಡಿಸಿ ನಕುಲ್ ಸುಮಾರು 164 ಜನರಿಗೆ ಐಸೋಲೇಶನ್ ಮತ್ತು ಕ್ವಾರಂಟೈನ್ ಒದಗಿಸುವ ಹೆಚ್ಚುವರಿ ಸೌಲಭ್ಯಗಳನ್ನು ಜಿಂದಾಲ್ನಲ್ಲಿ (ಎರಡು ಟೌನ್‌ಶಿಪ್‌ಗಳಾದ ವಿದ್ಯಾನಗರದಲ್ಲಿ ಸುಮಾರು 84 ಮತ್ತು ಎಚ್‌ಎಸ್‌ಟಿ 80) ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗಾಗಿ 130 ಹೆಚ್ಚುವರಿ ಐಸೋಲೇಶನ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಂದಾಲ್ಗೆ ನಿರ್ದೇಶಿಸಲಾಗಿದ್ದು, ಅವರು ಅಗತ್ಯ ಕ್ರಮಕೈಗೊಳ್ಳುತ್ತಿದ್ದಾರೆ ಎಂದಿದ್ದಾರೆ.
ಜಿಂದಾಲ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಸಭೆ ನಡೆಸಿದ ಡಿಸಿ ನಕುಲ್