ಕರ್ನಾಟಕ

karnataka

ETV Bharat / city

ಭಯ ಬೇಡ, ರಾಜ್ಯದಲ್ಲಿ ಕೊರೊನಾ ಸೋಂಕು ತಗುಲಿಲ್ಲ: ಶ್ರೀರಾಮುಲು - ನಮ್ಮ ರಾಜ್ಯದಲ್ಲಿ ಕರೋನಾ ಸೋಂಕು ತಗುಲಿಲ್ಲ

ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕು ತಗುಲಿಲ್ಲ. ಯಾವುದೇ ಭಯ ಬೇಡ, ಮದುವೆಯಲ್ಲಿ ಬ್ಯುಸಿ ಇದ್ದ ಹಿನ್ನೆಲೆ ಪ್ರತಿ ದಿನ ಸಮರ್ಪಕವಾಗಿ ಮಾಹಿತಿ ನೀಡಲಾಗಲಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

B. Sriramulu
ಬಿ.ಶ್ರೀರಾಮುಲು

By

Published : Mar 6, 2020, 5:03 AM IST

ಬಳ್ಳಾರಿ: ಕೊರೊನಾ ಬಗ್ಗೆ ಯಾವುದೇ ಭಯ ಬೇಡ. ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕು ತಗುಲಿಲ್ಲ. ಮದುವೆಯಲ್ಲಿ ಬ್ಯುಸಿ ಇದ್ದ ಹಿನ್ನೆಲೆ ಪ್ರತಿ ದಿನ ಸಮರ್ಪಕವಾಗಿ ಮಾಹಿತಿ ನೀಡಲಾಗಲಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಬಗ್ಗೆ ಯಾವುದೇ ಭಯ ಬೇಡ, ಪ್ರತಿದಿನ ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆದು ನೀಡುತ್ತೇನೆ. ಅತಿ ಹೆಚ್ಚಿನ ಉಷ್ಣಾಂಶವಿರುವ ನಮ್ಮ ಪ್ರದೇಶಗಳಲ್ಲಿ ಕೊರೊನಾ ಸೋಂಕು ತಗಲುವುದಿಲ್ಲ. ಕಡಿಮೆ ತಾಪಮಾನವಿರುವ ಪ್ರದೇಶಗಳಲ್ಲಿ ಸೋಂಕು ಹರಡುವ ಸಾಧ್ಯತೆಯಿದೆ. ಆದರೆ ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕು ತಗುಲಿಲ್ಲ ಎಂದು ತಿಳಿಸಿದರು.

ಇನ್ನು ಈ ಸಮಯದಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿದ್ದೇನೆ. ಕಷ್ಟ ಕಾಲದಲ್ಲಿಯೂ ಕಾರ್ಯಕ್ರಮ ಬಿಟ್ಟಿಲ್ಲ. ಮಗಳ ಮದುವೆಯನ್ನು ತುಂಬ ಇಷ್ಟ ಪಟ್ಟು ಮಾಡಿದ್ದೇನೆ. ದೇವರ ದಯೆಯಿಂದ ಯಾವುದೇ ವಿಘ್ನವಿಲ್ಲದೆ ಮದುವೆ ಜರುಗಿದೆ. ಒಬ್ಬ ತಂದೆಯಾಗಿ ಮಗಳ ಮದುವೆ ಮಾಡಿದ್ದೇನೆ ಎಂದರು.

ABOUT THE AUTHOR

...view details