ಕರ್ನಾಟಕ

karnataka

ETV Bharat / city

ಲಂಚಕ್ಕೆ ಬೇಡಿಕೆ ಇಟ್ಟ ಆರೋಪ.. ಬಳ್ಳಾರಿಯಲ್ಲಿ ಅಗ್ನಿಶಾಮಕದಳದ ಇಬ್ಬರು ನೌಕರರು ಎಸಿಬಿ ವಶಕ್ಕೆ

ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಎಫ್​ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ ಹಾಗೂ ಜಿಲ್ಲಾ ಅಗ್ನಿಶಾಮಕ ದಳ ಕಚೇರಿಯಲ್ಲಿ ಎಫ್​ಡಿಎ ಮಲ್ಲಿಕಾರ್ಜುನ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹದಳದ ಎಸ್​ಪಿ ಗುರುನಾಥ ಮಟ್ಟೂರು ನೇತೃತ್ವದ ತಂಡ ವಶಕ್ಕೆ ಪಡೆದಿದೆ.

Bellary
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಗ್ನಿಶಾಮಕದಳದ ನೌಕರರು ಎಸಿಬಿ ವಶಕ್ಕೆ

By

Published : Aug 7, 2021, 1:53 PM IST

ಬಳ್ಳಾರಿ: ಬಾಕಿ ವೇತನ ಪಾವತಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಇಬ್ಬರು ಅಗ್ನಿಶಾಮಕ ದಳದ ಎಫ್​ಡಿಎಗಳನ್ನು ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಫ್​ಡಿಎ ಮಲ್ಲಿಕಾರ್ಜುನ

ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಎಫ್​ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ ಹಾಗೂ ಜಿಲ್ಲಾ ಅಗ್ನಿಶಾಮಕ ದಳ ಕಚೇರಿಯಲ್ಲಿ ಎಫ್​ಡಿಎ ಮಲ್ಲಿಕಾರ್ಜುನ ಎಂಬುವರನ್ನು ಭ್ರಷ್ಟಾಚಾರ ನಿಗ್ರಹದಳದ ಎಸ್​ಪಿ ಗುರುನಾಥ ಮಟ್ಟೂರು ನೇತೃತ್ವದ ತಂಡ ವಶಕ್ಕೆ ಪಡೆದಿದೆ.

ಜಿಲ್ಲೆಯ ಸಿರುಗುಪ್ಪ ಪಟ್ಟಣದ ಅಗ್ನಿಶಾಮಕ ದಳದ ನೌಕರ ನರಸಪ್ಪ ಎಂಬಾತನಿಗೆ ಕಳೆದ 15 ವರ್ಷಗಳಿಂದಲೂ ವೇತನ ಪಾವತಿಯಾಗಿರಲಿಲ್ಲ. ಆ ಬಾಕಿ ವೇತನ ಬಿಡುಗಡೆ ಮಾಡುವಂತೆ ಕೋರಿ ನರಸಪ್ಪ ಜಿಲ್ಲಾ ಅಗ್ನಿಶಾಮಕ ದಳದ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಲೇವಾರಿ ಮಾಡಿಕೊಡಲು ಇಬ್ಬರು ಎಫ್​ಡಿಎಗಳು 13 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಅಷ್ಟೊಂದು ಹಣವನ್ನ ನೀಡಲು ನರಸಪ್ಪ ನಿರಾಕರಿಸಿದ್ದರು.

ಆದರೂ ಬೆಂಬಿಡದೆ ಕಾಡಿದ ಅಧಿಕಾರಿಗಳು ಕೊನೆಗೆ 8000 ರೂ.ಗೆ ವ್ಯವಹಾರ ಕುದಿರಿಸಿಕೊಂಡು ಶುಕ್ರವಾರ ಕಚೇರಿಗೆ ಬಂದು ನೀಡುವಂತೆ ತಾಕೀತು ಮಾಡಿದ್ದರು ಎನ್ನಲಾಗ್ತಿದೆ. ಅದರಂತೆಯೇ ನರಸಪ್ಪ ಹಣ ನೀಡಲು ಕಚೇರಿಗೆ ಹೋದ ಮಾಹಿತಿಯನ್ನಾಧರಿಸಿ ಎಸಿಬಿ ಎಸ್​ಪಿ ಗುರುನಾಥ ಮಟ್ಟೂರು ನೇತೃತ್ವದ ತಂಡ ದಾಳಿ ನಡೆಸಿದೆ.

ಇದನ್ನೂ ಓದಿ:ಭುಗಿಲೆದ್ದ ಅಸಮಾಧಾನ.. ಸಚಿವ ಆನಂದ್ ಸಿಂಗ್ ಮುನಿಸು, ರಾಮುಲುರಿಂದಲೂ ಅತೃಪ್ತಿ ಮಾತು?

ABOUT THE AUTHOR

...view details