ಕರ್ನಾಟಕ

karnataka

ETV Bharat / city

ಬಳ್ಳಾರಿ: ಮೂರು ಬಸ್​​ಗಳ ಗಾಜು ಪುಡಿ ಪುಡಿ

ನಿನ್ನೆ ಮಧ್ಯಾಹ್ನ ಬಳ್ಳಾರಿ ವಿಭಾಗದ ಗುತ್ತಿ-ಕರ್ನೂಲು ಮಾರ್ಗಕ್ಕೆ ತೆರಳುವ ಕೆಎಸ್ಆರ್​ಟಿಸಿ ಬಸ್​ನ ಮುಂಭಾಗಕ್ಕೆ ಹಾಗೂ ಬಳ್ಳಾರಿ-ಗುಂತಕಲ್ಲು, ಬಳ್ಳಾರಿ-ಕಡಪಕ್ಕೆ ಸಂಚಾರ ಬೆಳೆಸಿದ ಬಸ್​ನ ಹಿಂಭಾಗಕ್ಕೆ ಕಲ್ಲಿನಿಂದ ಹೊಡೆದು ಗಾಜನ್ನು ಪುಡಿ ಪುಡಿ ಮಾಡಲಾಗಿದೆ.

3 ksrtc bus glass broke in Bellary
ಕಲ್ಲಿನಿಂದ ಹೊಡೆದು ಬಸ್​ ಗಾಜು ಪುಡಿ ಪುಡಿ

By

Published : Apr 14, 2021, 11:44 AM IST

ಬಳ್ಳಾರಿ: ಬಳ್ಳಾರಿ ವಿಭಾಗದ ಮೂರು ಕೆಎಸ್ಆರ್​ಟಿಸಿ ಬಸ್​ಗಳಿಗೆ ಸಿಬ್ಬಂದಿ ಕುಟುಂಬಸ್ಥರು ಕಲ್ಲೆಸೆದು ಗ್ಲಾಸ್ ಪುಡಿಗಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಕಲ್ಲಿನಿಂದ ಹೊಡೆದು ಬಸ್​ ಗಾಜು ಪುಡಿ ಪುಡಿ

ರಾಜ್ಯವ್ಯಾಪಿ ಕರೆ ನೀಡಿದ್ದ ಸಾರಿಗೆ ನೌಕರರ‌ ಮುಷ್ಕರದ ನಡುವೆಯೂ ಅಲ್ಲಲ್ಲಿ ಬಸ್​ ಸಂಚಾರ ನಡೆಯುತ್ತಿದೆ. ನಿನ್ನೆ ಮಧ್ಯಾಹ್ನ ಬಳ್ಳಾರಿ ವಿಭಾಗದ ಗುತ್ತಿ-ಕರ್ನೂಲು ಮಾರ್ಗಕ್ಕೆ ತೆರಳುವ ಬಸ್​ನ ಮುಂಭಾಗಕ್ಕೆ, ಬಳ್ಳಾರಿ - ಗುಂತಕಲ್ಲು, ಬಳ್ಳಾರಿ - ಕಡಪಕ್ಕೆ ಸಂಚಾರ ಬೆಳೆಸಿದ ಬಸ್​ನ ಹಿಂಭಾಗಕ್ಕೆ ಕಲ್ಲಿನಿಂದ ಹೊಡೆದು ಗಾಜು ಧ್ವಂಸ ಮಾಡಿದ್ದಾರೆ.

ಈಟಿವಿ ಭಾರತದೊಂದಿಗೆ ಕೆ.ಎಸ್.ಆರ್.ಟಿ.ಸಿಯ ಚಾಲಕರೋರ್ವರು, ಒತ್ತಾಯ ಪೂರ್ವಕವಾಗಿ ಅಧಿಕಾರಿಗಳು ಮನೆಗಳಿಗೆ ಬಂದು ಕೆಲಸಕ್ಕೆ ಹೋಗಿ ಇಲ್ಲದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಕೆಲಸಕ್ಕೆ ಬಂದರೆ ಬಸ್​ನ ಗ್ಲಾಸ್​ ಒಡೆದು ಹಾಕಿದ್ದಾರೆ. ಗಾಜು ಒಡೆದ ಕಾರಣ ಇದರ ಹಣವನ್ನು ಚಾಲಕನೇ ಕಟ್ಟಬೇಕು ಎನ್ನುತ್ತಿದ್ದಾರೆ. ನಾವು ಬಸ್​ ಚಾಲನೆ ಮಾಡುವಾಗ ಪೊಲೀಸರು ರಕ್ಷಣೆ ನೀಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details