ಬೆಳಗಾವಿ: ಪ್ರವಾಹಕ್ಕೆ ಸಿಲುಕಿ ಮೂರು ಗಂಟೆ ಮರವೇರಿ ಕುಳಿತಿದ್ದ 60 ವರ್ಷದ ವೃದ್ಧನ ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಶಿಂಧೊಳ್ಳಿ ಬಿ.ಕೆ ಗ್ರಾಮದಲ್ಲಿ ನಡೆದಿದೆ.
ಖಾನಾಪುರ: ಭಾರಿ ಮಳೆಯಿಂದ ಏಕಾಏಕಿ ಪ್ರವಾಹ... 3 ಗಂಟೆ ಮರವೇರಿ ಕುಳಿತ ವೃದ್ಧ!
ಗದ್ದೆಯಲ್ಲಿ ಕೆಲಸ ಮಾಡುವಾಗ ನುಗ್ಗಿದ ನದಿ ನೀರು. ಪ್ರಾಣ ಉಳಿಸಿಕೊಳ್ಳಲು ಮರವೇರಿ ಕುಳಿತ ವೃದ್ಧ. ಮೂರು ಗಂಟೆ ಬಳಿಕ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಯಿಂದ ರಕ್ಷಣೆ.
ಖಾನಾಪುರ ತಾಲೂಕಿನ ಕಾಪೋಲಿ ಪಿಜಿ ಗ್ರಾಮದ ವಿಲಾಸ್ ದೇಸಾಯಿ (60) ಮೂರು ಗಂಟೆ ಮರದಲ್ಲಿ ಕುಳಿತು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ. ಶಿಂಧೋಳ್ಳಿ ಬಿ.ಕೆ. ಬಳಿ ಸ್ವಂತ ಗದ್ದೆಯಲ್ಲಿ ವಿಲಾಸ್ ದೇಸಾಯಿ ಕೆಲಸಕ್ಕೆ ಹೋಗಿದ್ದರು. ಧಾರಾಕಾರ ಮಳೆಗೆ ಪಾಂಡ್ರಿ ನದಿಯು ಶಿಂಧೋಳ್ಳಿ ಬಿ.ಕೆ. ಬಳಿ ಅಪಾಯದ ಮಟ್ಟ ಮೀರಿ ಹರಿಯಲು ಆರಂಭಿಸಿದೆ. ತಕ್ಷಣವೇ ಪಾಂಡ್ರಿ ನದಿ ನೀರು ನುಗ್ಗಿ ವಿಲಾಸ್ ದೇಸಾಯಿ ಗದ್ದೆ ಜಲಾವೃತಗೊಂಡಿತ್ತು. ಇದರಿಂದಾಗಿ ವಿಲಾಸ್ ಅವರು ಮರವೇರಿ ಕುಳಿತಿದ್ದರು.
ಬಳಿಕ ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಆಗಮಿಸಿ ವೃದ್ಧನನ್ನು ರಕ್ಷಣೆ ಮಾಡಿದ್ದಾರೆ.