ಕರ್ನಾಟಕ

karnataka

ETV Bharat / city

ಒಂದೆಡೆ ಸ್ಟಾಫ್ ‌ನರ್ಸ್ ಇನ್ನೊಂದೆಡೆ ದರೋಡೆಕೋರನಿಗೆ ಸೋಂಕು ದೃಢ - ಬೆಳಗಾವಿ ಜಿಲ್ಲಾ ಸುದ್ದಿ

ಬೆಳಗಾವಿ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​​​ನಲ್ಲಿ ಒಂದು ಕಡೆ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್​​​ ಮತ್ತು ಇನ್ನೊಂದು ಕಡೆ ಬಂಧಿತ ದರೋಡೆಕೋರನಿಗೆ ಸೋಂಕು ದೃಢಪಟ್ಟಿದೆ.

Staff nurse, gangster is infected coronavirus
ದರೋಡೆಕೋರನಿಗೆ ಕೊರೊನಾ ಸೋಂಕು ದೃಢ

By

Published : Jul 3, 2020, 1:27 PM IST

ಬೆಳಗಾವಿ:ಜಿಲ್ಲಾಸ್ಪತ್ರೆ ಕೋವಿಡ್ ವಾರ್ಡ್​​​​ನಲ್ಲಿ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ಸ್ಟಾಪ್ ನರ್ಸ್​​​​​ಗೆ ಮತ್ತು ದರೋಡೆಕೋರನೊಬ್ಬನಿಗೆ ಕೊರೊನಾ ವೈರಸ್​​​ ತಗುಲಿರುವುದು ದೃಢಪಟ್ಟಿದೆ.

ಸ್ಟಾಫ್ ನರ್ಸ್​​​​​ ಅವರನ್ನು ಇಂದು ಬೆಳಗ್ಗೆಯೇ ಕೋವಿಡ್ ವಾರ್ಡ್​​​ಗೆ ಶಿಫ್ಟ್ ಮಾಡಲಾಗಿದೆ. ಆಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಮೂವರನ್ನು ಕ್ವಾರೆಂಟೈನ್ ಮಾಡಲಾಗಿದೆ.

ದರೋಡೆಕೋರನಿಗೆ ಕೊರೊನಾ ಸೋಂಕು ದೃಢ

ದರೋಡೆ ಪ್ರಕರಣದಡಿ ಮೂರು ದಿನಗಳ ಹಿಂದೆ ಬಂಧಿತನಾಗಿ, ಹಿಂಡಲಗಾ ಜೈಲು ಸೇರಿದ್ದ ಕಳ್ಳನಿಗೂ ‌ಸೋಂಕು ತಗುಲಿದೆ. ಕ್ಯಾಂಪ್ ಠಾಣೆ ಪೊಲೀಸರು ಈತನನ್ನು ಬಂಧಿಸಿದ್ದರು.

ಅಲ್ಲದೇ ಡಿಸಿಪಿ ಸೇರಿದಂತೆ ಎಂಟು ಸಿಬ್ಬಂದಿ ಹಾಗೂ ಹಿಂಡಲಗಾ ಜೈಲಿನಲ್ಲಿನ 830 ಕೈದಿ ಮತ್ತು ಸಿಬ್ಬಂದಿಗೆ ಕೊರೊನಾ ಭೀತಿ ಎದುರಾಗಿದೆ. ಠಾಣೆಯನ್ನು ಸೀಲ್​​ಡೌನ್ ಮಾಡುವ ಸಾಧ್ಯತೆ ಇದೆ.

ABOUT THE AUTHOR

...view details