ಚಿಕ್ಕೋಡಿ: ಶಿವಾಜಿ ಪುತ್ಥಳಿ ಸ್ಥಳಾಂತರ ವಿಷಯದಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಶಿವಸೇನೆ ವಿಷ ಬೀಜ ಬಿತ್ತುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಶಿವಾಜಿ ಪುತ್ಥಳಿ ಸ್ಥಳಾಂತರ: ಶಿವಸೇನೆ ಮಾತು ಕೇಳಿ ಮರಾಠಿಗರಿಂದ ಪ್ರತಿಭಟನೆ - ಮಣಗುತ್ತಿ ಗ್ರಾಮದಲ್ಲಿ ಮರಾಠಿಗರಿಂದ ಪ್ರತಿಭಟನೆ
ಮರಾಠಿಗರ ಒಪ್ಪಿಗೆಯ ಮೇಲೆ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಸ್ಥಾಪಿಸಿದ್ದ ಶಿವಾಜಿ ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತಾದರೂ ಇದೀಗ ಶಿವಸೇನೆಯು ಇದರ ವಿರುದ್ಧ ಮರಾಠಿಗರು ಹೋರಾಟ ನಡೆಸುವಂತೆ ಪ್ರಚೋದನೆ ನೀಡಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಸ್ಥಾಪಿಸಿದ್ದ ಶಿವಾಜಿ ಪ್ರತಿಮೆಯನ್ನು ಗ್ರಾಮದ ಮರಾಠಿ ಮುಖಂಡರೆಲ್ಲ ಸೇರಿ ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಗ್ರಾಮದೇವತೆಯ ಜಾತ್ರೆಯಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದು, ಇದಕ್ಕೆ ಶಿವಸೇನೆ ವಿರೋಧ ವ್ಯಕ್ತಪಡಿಸಿದೆ. ಮರಾಠಿಗರ ಒಪ್ಪಿಗೆಯ ಮೇರೆಗೆ ಪ್ರತಿಮೆ ಸ್ಥಳಾಂತರಿಸಲಾಗಿತ್ತಾದರೂ ಇದೀಗ ಶಿವಸೇನೆಯು ಇದರ ವಿರುದ್ಧ ಮರಾಠಿಗರು ಹೋರಾಟ ನಡೆಸುವಂತೆ ಪ್ರಚೋದನೆ ನೀಡಿದೆ.
ಹೀಗಾಗಿ ಬೃಹತ್ ಸಂಖ್ಯೆಯಲ್ಲಿ ಮಣಗುತ್ತಿ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮಕ್ಕೆ ಮಹಾರಾಷ್ಟ್ರದಿಂದ ಶಿವಸೇನೆ ಕಾರ್ಯಕರ್ತರು ಬಂದು ಗಲಾಟೆ ನಡೆಸುವ ಸಾಧ್ಯತೆಯಿದ್ದು, 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.