ಕರ್ನಾಟಕ

karnataka

ETV Bharat / city

'ಅವನೇ ನನ್ನ ಗಂಡ'.. ಬೆಳಗಾವಿಯಲ್ಲಿ ಸಾಮಾಜಿಕ ಕಾರ್ಯಕರ್ತೆ - ಅಧಿಕಾರಿ ಮಧ್ಯೆ ವಿವಾದ

ರಾಜಕುಮಾರ್ ಟಾಕಳೆ ಎಂಬುವವರು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ನವ್ಯಾಶ್ರೀ ಆರ್‌.ರಾವ್ ಮತ್ತು ಆಕೆಯ ಸ್ನೇಹಿತನ ವಿರುದ್ಧ ಸುಲಿಗೆ, ಸುಳ್ಳು ಅತ್ಯಾಚಾರ ಆರೋಪ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ನವ್ಯಾಶ್ರೀ
ಸಾಮಾಜಿಕ ಕಾರ್ಯಕರ್ತೆ ನವ್ಯಾಶ್ರೀ

By

Published : Jul 19, 2022, 1:54 PM IST

Updated : Jul 19, 2022, 2:32 PM IST

ಬೆಳಗಾವಿ: ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಟಾಕಳೆ ಮತ್ತು ಸಾಮಾಜಿಕ ಕಾರ್ಯಕರ್ತೆ ನವ್ಯಾಶ್ರೀ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ನವ್ಯಾಶ್ರೀ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಧಿಕಾರಿ ರಾಜಕುಮಾರ ಟಾಕಳೆ ದೂರು ನೀಡಿದ್ರೆ, ಇತ್ತ ರಾಜಕುಮಾರ ಅವರೇ ನನ್ನ ಗಂಡ ಎಂದು ನವ್ಯಾಶ್ರೀ ಹೇಳುತ್ತಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನವ್ಯಾಶ್ರೀ, ರಾಜಕುಮಾರ ಟಾಕಳೆ ನನ್ನ ಗಂಡ, ಅವನಿಂದ ನನಗೆ ಏನು ಮೋಸ ಆಗಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಹೇಳಿದರು. ನಾನು 15 ದಿನಗಳಿಂದ ಭಾರತದಲ್ಲಿ ಇರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ಫೋಟೋ, ವಿಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ನಾನು ಬೆಳಗಾವಿ ಪೊಲೀಸ್ ಕಮಿಷನರ್ ಭೇಟಿಯಾಗಿ ದೂರು ಕೊಡುತ್ತೇನೆ ಎಂದರು.

ನನ್ನ ಮೇಲೆ ಎಫ್​ಐಆರ್ ದಾಖಲಾಗಿರುವ ಬಗ್ಗೆ ಮಾಹಿತಿಯಿಲ್ಲ. ಈವರೆಗೂ ಯಾವುದೇ ಪೊಲೀಸರು ನನಗೆ ಫೋನ್ ಮಾಡಿಲ್ಲ. ಎಫ್​ಐಆರ್ ಕಾಪಿ‌ ಪಡೆದು ಮಾತಾಡುತ್ತೇನೆ. ರಾಜಕುಮಾರ ಟಾಕಳೆ ನನ್ನ ಗಂಡ. ಅವನಿಂದ ನನಗೆ ಏನು ಮೋಸ ಆಗಿದೆ. ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಾನು ಯಾವ ರೀತಿ ಮದುವೆ ಆಗಿದ್ದೇನೆ ಅನ್ನೋದನ್ನು ದಾಖಲೆ ಸಮೇತ ಬರುತ್ತೇನೆ ಎಂದು ನವ್ಯಾಶ್ರೀ ತಿಳಿಸಿದರು.

ಸಾಮಾಜಿಕ ಕಾರ್ಯಕರ್ತೆ ನವ್ಯಾಶ್ರೀ ಪ್ರತಿಕ್ರಿಯೆ

ಇದಕ್ಕೂ ಮುನ್ನ ಬೆಳಗಾವಿ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಅವರು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ನವ್ಯಾ ಶ್ರೀ ಆರ್‌.ರಾವ್ ಮತ್ತು ಅವರ ಸ್ನೇಹಿತನ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಸುಲಿಗೆ, ಸುಳ್ಳು ಅತ್ಯಾಚಾರ ಆರೋಪ ಹಾಗೂ ಜೀವ ಬೆದರಿಕೆ ಹಾಕುತ್ತಿದ್ದಾರೆ. ಜೊತೆಗೆ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ರಾಜಕುಮಾರ ಟಾಕಳೆ ನೀಡಿದ ದೂರಿನಲ್ಲಿ ಉಲ್ಲೇಖವಿದೆ.

ಸದ್ಯ ಬೆಳಗಾವಿ ಎಪಿಎಂಸಿ ಪೊಲೀಸರು ನವ್ಯಾಶ್ರೀ ವಿರುದ್ಧ ಐಪಿಸಿ 1860(u/s.384, 448, 504, 506, 34) ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ.

Last Updated : Jul 19, 2022, 2:32 PM IST

ABOUT THE AUTHOR

...view details