ಕರ್ನಾಟಕ

karnataka

ETV Bharat / city

VIDEO: ಕಿತ್ತೂರು ಶಾಸಕ, ಅವರ ಪತ್ನಿಗೆ ಹೂಮಳೆಗರೆದ ಪೊಲೀಸರು: ವ್ಯಾಪಕ ಆಕ್ರೋಶ - belgaum news

ಬೈಲಹೊಂಗಲ ಪಟ್ಟಣದಲ್ಲಿರುವ ಶಾಸಕ ಮಹಾಂತೇಶ ದೊಡ್ಡಗೌಡರ ಮನೆಗೆ ತೆರಳಿದ ಪೊಲೀಸ್ ಅಧಿಕಾರಿಗಳು ಮಹಾಂತೇಶ ಮತ್ತು ಅವರ ಪತ್ನಿ ಮೈಮೇಲೆ ಪುಷ್ಪವೃಷ್ಟಿ ಮಾಡಿ ಜನ್ಮದಿನ ಆಚರಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

police
ಕಿತ್ತೂರು ಶಾಸಕ, ಅವರ ಪತ್ನಿಗೆ ಹೂಮಳೆಗೈದ ಪೊಲೀಸರು

By

Published : Sep 4, 2021, 2:17 PM IST

Updated : Sep 4, 2021, 7:00 PM IST

ಬೆಳಗಾವಿ:ಹುಟ್ಟುಹಬ್ಬದ ಹಿನ್ನೆಲೆ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಹಾಗೂ ಅವರ ಪತ್ನಿ ಮೇಲೆ ಬೈಲಹೊಂಗಲ ವಿಭಾಗದ ಪೊಲೀಸರು ಹೂಮಳೆಗರೆದಿರುವ ಘಟನೆ ನಡೆದಿದೆ. ಇದು ಪೊಲೀಸ್ ಅಧಿಕಾರಿಗಳ ಗುಲಾಮಗಿರಿಯ ನಡೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಿತ್ತೂರು ಶಾಸಕ, ಅವರ ಪತ್ನಿಗೆ ಹೂಮಳೆಗೈದ ಪೊಲೀಸರು

ಬೈಲಹೊಂಗಲ ಪಟ್ಟಣದಲ್ಲಿರುವ ಶಾಸಕ ಮಹಾಂತೇಶ ದೊಡ್ಡಗೌಡರ ಮನೆಗೆ ತೆರಳಿದ ಪೊಲೀಸ್ ಅಧಿಕಾರಿಗಳು ಮಹಾಂತೇಶ ಮತ್ತು ಅವರ ಪತ್ನಿ ಮೈಮೇಲೆ ಪುಷ್ಪವೃಷ್ಟಿ ಮಾಡಿ ಜನ್ಮದಿನ ಆಚರಿಸಿದ್ದರು. ಇದರಲ್ಲಿ ಬೈಲಹೊಂಗಲ ಡಿಎಸ್​ಪಿ ಮತ್ತು ಸಿಪಿಐ, ನೇಸರಗಿಯ ಪಿಎಸ್ಐ ಹಾಗೂ ಎಎಸ್ಐ ಭಾಗಿಯಾಗಿದ್ದರು.

ಇದನ್ನೂ ಓದಿ: ಸರ್ಕಾರದಿಂದ ಹೊರಬೀಳದ ಗಣೇಶ ಚತುರ್ಥಿ ಆಚರಣೆ ನಿಯಮ; ಗೊಂದಲದ ಗೂಡಾದ ಹಬ್ಬದ ಸಂಭ್ರಮ!

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಇದು ಪೊಲೀಸ್ ಅಧಿಕಾರಿಗಳ ಗುಲಾಮಗಿರಿ ಸೂಚಿಸುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Sep 4, 2021, 7:00 PM IST

ABOUT THE AUTHOR

...view details