ಕರ್ನಾಟಕ

karnataka

ETV Bharat / city

Omicron ಬಗ್ಗೆ ಆತಂಕ ಬೇಡ.. ಮುಂಜಾಗ್ರತಾ ಕ್ರಮ ಅಗತ್ಯ: ಸಚಿವ ಸುಧಾಕರ್

ಒಮಿಕ್ರಾನ್ ಬಗ್ಗೆ ಆತಂಕ ಇಲ್ಲ. ಆದರೆ, ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದೆ. ಜನ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಲಹೆ ನೀಡಿದರು.

Minister Dr. K Sudhakar
ಡಾ.ಕೆ. ಸುಧಾಕರ್

By

Published : Dec 17, 2021, 5:48 PM IST

ಬೆಳಗಾವಿ:ಒಮಿಕ್ರಾನ್ ಬಗ್ಗೆ ಆತಂಕ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 8 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಪರೀಕ್ಷೆ ಮಾಡಿ, ಅವರ ಮೂಲಕ ಬೇರೆಯವರಿಗೆ ಹರಡದಂತೆ ಕ್ರಮ ವಹಿಸಬೇಕಿದೆ.

ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ಮಾಡಿಲಿದ್ದೇವೆ. ಸಿಎಂ ಜತೆ ಕೂಡ ಚರ್ಚೆ ಮಾಡಲಿದ್ದೇವೆ. ಯಾವ ಕ್ರಮ ತೆಗೆದುಕೊಳ್ಳಬೇಕು ಅಂತಾ ಸಲಹೆ ಪಡೆಯುತ್ತೇವೆ. ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದೆ. ಜನ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಒಮಿಕ್ರಾನ್ ಬಗ್ಗೆ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ

ಭೈರತಿ ಬಸವರಾಜ್ ಪ್ರಕರಣ ಸಂಬಂಧ ಸಿದ್ದರಾಮಯ್ಯ ಜತೆ ಸಂಧಾನ ಮಾತುಕತೆ ವಿಚಾರ ಪ್ರಸ್ತಾಪಿಸಿ, ಸದನದಲ್ಲಿ ನಿರ್ಣಾಯಕ ಆಗಿತ್ತು. ಎಲ್ಲರೂ ಒಪ್ಪಿಕೊಳ್ಳಬೇಕು. 13 ವರ್ಷದ ಹಿಂದೆ ಟ್ರಯಲ್ ಕೇಸ್‌ನಲ್ಲಿ, ಬೈರತಿ ಪರವಾಗಿ ಬಂದಿತ್ತು. ಹೈಕೋರ್ಟ್​ನಲ್ಲಿ ಪೆಂಡಿಂಗ್ ಇತ್ತು. ವಿಪಕ್ಷ ನಾಯಕರು ಪ್ರಸ್ತಾಪಿಸಿದ್ರು, ಕಾಗ್ನಿಜಂಟ್ ಹಾಕಿ ಚರ್ಚೆಗೆ ಅವಕಾಶ ನೀಡಬೇಕು ಎಂದು. ಹಾಗೆ ಮಾಡಲು ಬರೋದಿಲ್ಲ. ಕಾಂಗ್ರೆಸ್​​ನವರು ಷಡ್ಯಂತ್ರ ಮಾಡುತ್ತಿರಬಹುದು ಎಂದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿನ್ನೆ(ಗುರುವಾರ) ಸದನದಲ್ಲಿ ಪ್ರಸ್ತಾಪಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರು ಎರಡು ಬಾರಿ ಸ್ಪೀಕರ್ ಆಗಿದ್ದವರು. ಮೌಲ್ಯಗಳಿಗೆ ರಾಯಭಾರಿ ಆಗಿದ್ದವರು. ನನಗೆ ವೈಯಕ್ತಿಕ ದ್ವೇಷ ಇಲ್ಲ. ಅವರು ಮುಖವಾಡ ಹಾಕಿಕೊಂಡು ಬದುಕುತ್ತಿರುವುದರಲ್ಲಿ ಅನುಮಾನವಿಲ್ಲ ಎಂದರು.

ಇದನ್ನೂ ಓದಿ:ಕೊರೊನಾ ಲಸಿಕೆ ಹೆಸರಲ್ಲಿ ಕೋಟಿ ಕೋಟಿ ಕದ್ದ ಸೈಬರ್ ಕಳ್ಳರು.. ಈ ವೈದ್ಯರಿಗೆ 11.80 ಕೋಟಿ ರೂ. ವಂಚನೆ!

ABOUT THE AUTHOR

...view details