ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಅತ್ಯಾಚಾರ, ಕಿಡ್ನಾಪ್,ಗರ್ಭಪಾತ, ಮೋಸ ಸೇರಿದಂತೆ ಇತರ ಸೆಕ್ಸನ್ಗಳ ಅಡಿ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ನವಶ್ರೀ ಆರ್. ರಾವ್ ಇಂದು ಮಧ್ಯಾಹ್ನ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಆಗಮಿಸಿ ಕೈಬರಹದಲ್ಲಿ ಹನ್ನೆರಡು ಪುಟಗಳ ದೂರು ನೀಡಿದ್ದಾರೆ.
ಸದ್ಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ರಾಜಕುಮಾರ್ ಟಾಕಳೆ ವಿರುದ್ಧ (376)ಅತ್ಯಾಚಾರ, (366)ಕಿಡ್ನಾಪ್, (312)ಗರ್ಭಪಾತ ಮಾಡಿಸಿದ್ದು, (420) ಮೋಸ, (354) ಮಹಿಳೆ ಮೇಲೆ ಹಲ್ಲೆ, (504) ಅವಾಚ್ಯವಾಗಿ ನಿಂದಿಸುವುದು, (506)ಜೀವ ಬೆದರಿಕೆ, (509)ಗೌರವಕ್ಕೆ ಧಕೆ ತರುವುದು ಹಾಗೂ (IT act 66E) ಖಾಸಗಿತನಕ್ಕೆ ಧಕೆ ವಿಚಾರದಡಿಯಲ್ಲಿ,(67A) ಲೈಂಗಿಕ ಪ್ರಚೋದನಕಾರಿ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಸೆಕ್ಷನ್ ಹಾಗೂ ಆ್ಯಕ್ಟ್ಗಳನ್ನು ಹಾಕಿ ಎಫ್‌ಐಆರ್ ದಾಖಲಾಗಿದೆ.
ದೂರು ನೀಡಿದ ಬಳಿಕ ಬೆಳಗಾವಿ ಖಾಸಗಿ ಹೋಟೆಲ್‌ಗೆ ತೆರಳಿರುವ ನವ್ಯಶ್ರೀ, ನಾಳೆ ಬೆಳಗ್ಗೆ ಬೆಂಗಳೂರಿಗೆ ತೆರಳಿ ಮತ್ತೆ ಸೋಮವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ಸದ್ಯ ರಾಜಕುಮಾರ್ ಟಾಕಳೆ ನೀಡಿರುವ ದೂರಿನ ವಿಚಾರಣೆಗೆ ಬೆಳಗಾವಿ ಎಪಿಎಂಸಿ ಪೊಲೀಸರು ನೋಟಿಸ್ ನೀಡಿದ್ದು, ಬೆಳಗಾವಿಯಲ್ಲಿ ಇರಲು ವಸತಿ ಸಮಸ್ಯೆ ಕಾರಣ ನೀಡಿ ಸೋಮವಾರ ಹಾಜರಾಗುವುದಾಗಿ ಮುಚ್ಛಳಿಕೆ ಪತ್ರವನ್ನ ನವಶ್ರೀ ಬರೆದು ಕೊಟ್ಟಿದ್ದು, ಸೋಮವಾರ ಪೊಲೀಸರ ತನಿಖೆಗೆ ಸಹಕಾರ ಕೊಡುತ್ತೇನೆ ಎಂದಿದ್ದಾರೆ.