ಚಿಕ್ಕೋಡಿ: ಬಿಜೆಪಿ ಸಂಸದರು ನೆರೆ ಪರಿಹಾರ ತರಲು ವಿಫಲರಾಗಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ತುಟಿ ಪಿಟಕ್ ಎನ್ನದೆ ಮೌನಕ್ಕೆ ಜಾರಿದ ಪ್ರಸಂಗ ನಡೆಯಿತು.
ನೆರೆ ಪರಿಹಾರ ಬಗ್ಗೆ ಪ್ರಶ್ನಿಸಿದ್ರೇ ಬಿಜೆಪಿ ರಾಜ್ಯಾಧ್ಯಕ್ಷರ ಬಾಯಿ 'ಬಂದ್'.. ನಳಿನ್ ಕುಮಾರ್ ಕಟೀಲ್‌ರಿಗೆ ಮಾತು ಬರಲ್ವಾ? - ಬಿಜೆಪಿ ರಾಜ್ಯಾಧ್ಯಕ್ಷ
ಬಿಜೆಪಿ ಸಂಸದರು ನೆರೆ ಪರಿಹಾರ ತರಲು ವಿಫಲರಾಗಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ತುಟಿ ಪಿಟಕ್ ಎನ್ನದೆ ಮೌನಕ್ಕೆ ಜಾರಿದ ಪ್ರಸಂಗ ನಡೆಯಿತು.
ನಳಿನ್ ಕುಮಾರ್ ಕಟೀಲ್
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸoಬಾ ಪಟ್ಟಣದಲ್ಲಿ ಬಿಜೆಪಿ ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೂ ಕಟೀಲ್ ಯಾವುದೇ ಉತ್ತರ ನೀಡದೆ ಮೌನವಾಗಿದ್ರು. ನೆರೆ ಪೀಡಿತ ಚಿಕ್ಕೋಡಿ ತಾಲೂಕಿಗೆ ಭೇಟಿ ನೀಡಿ, ಪರಿಹಾರದ ಬಗ್ಗೆ ಮಾತನಾಡದೇ ಕಾರಿನಲ್ಲಿ ಹೊರಟು ಹೋದರು.