ಕರ್ನಾಟಕ

karnataka

ಮಹಾರಾಷ್ಟ್ರದಲ್ಲಿ ಸಿಲುಕಿದ 60ಕ್ಕೂ ಹೆಚ್ಚಿನ ಕನ್ನಡಿಗರು... ವಾಪಸ್​ ಕರೆಸಿಕೊಳ್ಳಲು ಮನವಿ

By

Published : Apr 16, 2020, 6:39 PM IST

ಲಾಕ್​ಡೌನ್​ಗೂ ಮುನ್ನ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋದ ಕಾರ್ಮಿಕರು ಅಲ್ಲಲ್ಲೇ ಸಿಲುಕಿದ್ದು, ಊಟವಿಲ್ಲದೆ ಪರದಾಡುವಂತಾಗಿದೆ. ಹಾಗಾಗಿ ತಮ್ಮ ತಮ್ಮ ತವರು ಸೇರಲು ಹವಣಿಸುತ್ತಿದ್ದಾರೆ.

more than 60 people stranded on the Maharashtra-Karnataka border
ಮಹಾರಾಷ್ಟ್ರ- ಕರ್ನಾಟಕದ ಗಡಿಯಲ್ಲಿ ಸಿಲುಕಿದ 60 ಕ್ಕೂ ಹೆಚ್ಚು ಕನ್ನಡಿಗರು..!

ಚಿಕ್ಕೋಡಿ: ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದ ರಾಜ್ಯದ 60ಕ್ಕೂ ಹೆಚ್ಚು ಕಾರ್ಮಿಕರು ಗಡಿಯಲ್ಲಿ ಲಾಕ್ ಆಗಿದ್ದು, ಸರಿಯಾದ ವ್ಯವಸ್ಥೆ ಇಲ್ಲದೇ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಹಾರಾಷ್ಟ್ರದ ವಡಗಾಂವಗೆ ಬಂದು 16 ದಿನದ ಕ್ವಾರಂಟೈನ್ ಮುಗಿಸಿದ್ದೀವಿ. ನಮ್ಮನ್ನ ರಾಜ್ಯಕ್ಕೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಕರ್ನಾಟಕದ ತುಮಕೂರು, ಮಂಡ್ಯ, ಹಾಸನ ಮೂಲದ ಕಾರ್ಮಿಕರು ಸರಿಯಾದ ವ್ಯವಸ್ಥೆ ನಮಗೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮೂರಿಗೆ ಹೋಗಿ ಮತ್ತೆ ಕ್ವಾರಂಟೈನ ಆಗ್ತೀವಿ. ದಯವಿಟ್ಟು ನಮ್ಮನ್ನ ಕರೆಸಿಕೊಳ್ಳಿ ಎಂದು ಕಾರ್ಮಿಕರು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details