ಕರ್ನಾಟಕ

karnataka

ETV Bharat / city

ಬೆಳಗಾವಿಯಲ್ಲೂ ಮೈಕ್ರೋಸಿಸ್ ಚಿಕಿತ್ಸಾ ಕೇಂದ್ರ ಸ್ಥಾಪಿಸಲು ಸಿಎಂಗೆ ಮನವಿ ಮಾಡಲಾಗುವುದು : ಶಾಸಕ ಅನಿಲ್ ಬೆನಕೆ - ಬ್ಲ್ಯಾಕ್ ಫಂಗಸ್ ಪ್ರಕರಣ

ಶ್ರೀಗಳ ಸಲಹೆ ಮೇರೆಗೆ ಜನರಿಗೆ ಔಷಧಿ ವಿತರಿಸಲಾಗುತ್ತಿದೆ. ಈ ಔಷಧಿ‌ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳ ಮಾಡಲಿದ್ದು, ಕೊರೊನಾ ಲಕ್ಷ್ಮಣಗಳನ್ನು ಕಡಿಮೆ ಮಾಡಲಿದೆ‌.ಹೀಗಾಗಿ, ಈ ತರದ 10 ಸಾವಿರ ಬಾಟಲ್​​ಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ. ಈ ಔಷಧಿಯನ್ನು ಜನರು ಪ್ರತಿದಿನ ಐದು ಬಾರಿ 5 ಎಂಎಲ್​ ಕುಡಿಯಬೇಕು..

Belgaum
ಶಾಸಕ ಅನಿಲ್ ಬೆನಕೆ

By

Published : May 24, 2021, 1:57 PM IST

ಬೆಳಗಾವಿ :ಹೆಚ್ಚುತ್ತಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳ ತಡೆಗೆ ಬೆಳಗಾವಿಯಲ್ಲೂ ಮೈಕ್ರೋ ಮೈಕೋಸಿಸ್ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸುವಂತೆ ಸಿಎಂಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಹೇಳಿದರು.

ಬೆಳಗಾವಿಯಲ್ಲೂ ಮೈಕ್ರೋಸಿಸ್ ಚಿಕಿತ್ಸಾ ಕೇಂದ್ರ ಸ್ಥಾಪನೆ ಬಗ್ಗೆ ಸಿಎಂಗೆ ಮನವಿ ಮಾಡಲು ಚಿಂತನೆ..

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕೊರೊನಾ ಸೋಂಕಿನ‌ ನಡುವೆಯೂ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿ ಇಬ್ಬರು ಮೃತಪಟ್ಟಿದ್ದಾರೆ‌.

ಹೀಗಾಗಿ‌, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಿಎಂಗೆ ತಿಳಿಸಿ, ಆದಷ್ಟು ಬೇಗ ಬೆಳಗಾವಿಯಲ್ಲೂ ಮೈಕ್ರೋಸಿಸ್ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಅವಕಾಶ ನೀಡುವಂತೆ ಮನವಿ ಮಾಡಲಾಗುವುದು ಎಂದರು.

ಹೋಮಿಯೋಪತಿ ಔಷಧಿ ವಿತರಣೆ :ಬೆಳಗಾವಿ ಜನರಿಗೆ ಆಕ್ಸಿಜನ್ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕನೇರಿ ಮಠದ ಶ್ರೀಗಳ ನೇತೃತ್ವದಲ್ಲಿ ಹೋಮಿಯೋಪತಿ ಔಷಧಿಯನ್ನು ಸಿದ್ದಪಡಿಸಲಾಗಿದೆ. ಈ ಔಷಧಿ ಸಾಕಷ್ಟು ಪರಿಣಾಮಕಾರಿ ಆಗಿದೆ.

ಹೀಗಾಗಿ, ಶ್ರೀಗಳ ಸಲಹೆ ಮೇರೆಗೆ ಜನರಿಗೆ ಔಷಧಿ ವಿತರಿಸಲಾಗುತ್ತಿದೆ. ಈ ಔಷಧಿ‌ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳ ಮಾಡಲಿದ್ದು, ಕೊರೊನಾ ಲಕ್ಷ್ಮಣಗಳನ್ನು ಕಡಿಮೆ ಮಾಡಲಿದೆ‌.

ಹೀಗಾಗಿ, ಈ ತರದ 10 ಸಾವಿರ ಬಾಟಲ್​​ಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ. ಈ ಔಷಧಿಯನ್ನು ಜನರು ಪ್ರತಿದಿನ ಐದು ಬಾರಿ 5 ಎಂಎಲ್​ ಕುಡಿಯಬೇಕು.

ಇದಲ್ಲದೇ ಕೊರೊನಾ ಮಾತ್ರೆಗಳ ಕಿಟ್ ನೀಡಲಾಗುತ್ತಿದ್ದು, ಜನರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಐದು ಸಾವಿರ ಔಷಧಿ‌ ಸಿದ್ದಪಡಿಸಿ ನೀಡಲಾಗುತ್ತಿದೆ.

ಇದರ ಉದ್ದೇಶ ಯಾರು ಕೂಡ ಕೊರೊನಾ‌ ಅಂತಾ ಆಸ್ಪತ್ರೆಗೆ ದಾಖಲಾಗಬಾರದು‌. ಮನೆಯಲ್ಲಿಯೇ ಎಲ್ಲರೂ ಆರೋಗ್ಯವಂತರಾಗಿ ಇರಬೇಕು ಎಂದರು.

ಓದಿ:ಗ್ರಾಮೀಣ ಭಾಗದಲ್ಲಿ ಕೊರೊನಾ ಏರಿಕೆ- ಮರಣ ಪ್ರಮಾಣ ಇಳಿಕೆ: ಸಚಿವ ಸುರೇಶ್ ಕುಮಾರ್

ABOUT THE AUTHOR

...view details