ಬೆಳಗಾವಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 'ಹರ್ ಘರ್ ತಿರಂಗಾ' ಅಭಿಯಾನದ ನಿಮಿತ್ತ ನಗರದ ಕೋಟೆ ಕೆರೆ ಆವರಣದಲ್ಲಿ ನಿರ್ಮಾಣಗೊಂಡ ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಶಾಸಕ ಅನಿಲ್ ಬೆನಕೆ ಧ್ವಜಾರೋಹಣ ನೇರವೆರಿಸಿದರು. ಇದೇ ವೇಳೆ ಕೋಟೆಕೆರೆ ಆವರಣದಿಂದ ಅಶೋಕ ವೃತ್ತ, ಆರ್ಟಿಓ ಸರ್ಕಲ್ ಮಾರ್ಗದ ಮೂಲಕ ಚೆನ್ನಮ್ಮ ವೃತ್ತದವರೆಗೆ ತಿರಂಗಾ ರ‍್ಯಾಲಿ ನಡೆಯಿತು.
ಇಲ್ಲಿನ ಅಶೋಕ ನಗರದ ಕೋಟೆ ಕೆರೆ ಆವರಣದಲ್ಲಿರುವ 110 ಮೀಟರ್ ಎತ್ತರದ ಧ್ವಜಸ್ತಂಭದ ಮೇಲೆ 75 ಕೆ.ಜಿ. ತೂಕದ ಧ್ವಜವನ್ನು ಬಟನ್ ಒತ್ತುವ ಮೂಲಕ ಶಾಸಕ ಅನಿಲ್ ಬೆನಕೆ ಧ್ವಜಾರೋಹಣ ಮಾಡಿದರು. ಇದಕ್ಕೂ ಮುನ್ನ ಧ್ವಜಸ್ತಂಭಕ್ಕೆ ಶಾಸಕರು ಪೂಜೆ ಸಲ್ಲಿಸಿದರು.