ಬೆಳಗಾವಿ :ಮಂಗಳಾ ಅಂಗಡಿ ಗೆಲುವು ಜನತೆಗೆ ಸಿಕ್ಕಿರುವ ಗೆಲುವಾಗಿದೆ. ಕೇಂದ್ರದ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವಕ್ಕೆ ಬೆಳಗಾವಿ ಜನತೆ ಬೆಂಬಲಿಸಿದ್ದಾರೆ ಎಂದು ಬೀಗರು ಆಗಿರುವ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ದಿ. ಸುರೇಶ ಅಂಗಡಿ ಅವರ ನಿವಾಸದಲ್ಲಿ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸುರೇಶ ಅಂಗಡಿ ಅವರು ಮಾಡಿರುವ ಕೆಲಸಗಳು ಹಾಗೂ ಸಾಧನೆಗೆ ಜನರು ಮನ್ನಣೆ ನೀಡಿದ್ದಾರೆ.